ಕಿಚ್ಚ ಸುದೀಪ್ ಕೋರಿಕೆಗೆ ಅಚ್ಚರಿಗೊಂಡ ದುನಿಯಾ ವಿಜಿ..!

0
204

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದುನಿಯಾ ವಿಜಯ್ ಅವರಲ್ಲೊಂದು ಮನವಿ ಮಾಡಿದ್ದಾರೆ..! ಸುದೀಪ್ ಅವರ ಕೋರಿಕೆಗೆ ದುನಿಯಾ ವಿಜಿ ಅಚ್ಚರಿಗೊಂಡಿದ್ದಾರೆ. ಸುದೀಪ್ ಇಂಥಾ ಕೋರಿಕೆ ಮಾಡಬಹುದು ಅಂತ ಬಹಶಃ ವಿಜಿ ಊಹಿಸಿರಲಿಕ್ಕಿಲ್ಲ. ಅರೆ, ಸುದೀಪ್ ಮಾಡಿದ ಆ ಕೋರಿಕೆ ಏನು ಅಂದ್ರಾ?
ಸುದೀಪ್ ಆಗಾಗ ಬಂದು ನಂಗೆ ಜೈಮ್ ಟ್ರೈನಿಂಗ್ ಮಾಡಿ ಅಂತ ವಿಜಿ ಅವ್ರಲ್ಲಿ ಕೇಳಿಕೊಂಡಿದ್ದಾರೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ ನಟಿಸ್ತಾ ಇರೋ ‘ಸಲಗ’ ಸಿನಿಮಾದ ಮುಹೂರ್ತ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯನಟ ರಾಘವೇಂದ್ರ ರಾಜ್​ಕುಮಾರ್ ಮೊದಲಾದವ್ರು ಪಾಲ್ಗೊಂಡಿದ್ರು. ಅಂತೆಯೇ ಕಿಚ್ಚ ಸುದೀಪ್ ಕೂಡ ಬಂದಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ಮಾತು ಮುಗಿಸುವ ಮುಂಚೆ ‘ವಿಜಯ್ ಅವ್ರಲ್ಲಿ ಕೇಳ್ಕೋಳಕ್ಕೆ ಇಷ್ಟಪಡ್ತೀನಿ. ನಂಗೂ ಆಗಾಗ ಬಂದು ಜಿಮ್ ಟ್ರೈನಿಂಗ್ ಮಾಡಿ ಹೋಗಿ’ ಅಂದ್ರು. ಸುದೀಪ್ ದುನಿಯಾ ವಿಜಯ್ ಅವರನ್ನು ಶ್ಲಾಘಿಸಿದ ಪರಿ ಅದಾಗಿತ್ತು.
ಪ್ರತಿಯೊಬ್ಬ ಕಲಾವಿದನಲ್ಲಿ ಒಬ್ಬ ನಿರ್ದೇಶಕನಿರುತ್ತಾನೆ. ಪ್ರತಿಯೊಬ್ಬ ನಿರ್ದೇಶಕನಲ್ಲೊಬ್ಬ ಕಲಾವಿದ ಇರುತ್ತಾನೆ. ಹಾಗಾಗಿ ನಟರು ನಿರ್ದೇಶನದ ಮನಸ್ಸು ಮಾಡೋದು ಒಳ್ಳೆಯ ಬೆಳವಣಿಗೆ. ಹಾಗಂತ ಡೈರೆಕ್ಟರ್ ಗಳನ್ನು ವೋವರ್​ಟೇಕ್ ಮಾಡ್ಬೇಕು ಅಂತ ನಾನ್ ಹೇಳ್ತಾ ಇಲ್ಲ. ಬಿರಿಯಾನಿ ಮಾಡೋಕೆ ಬರ್ದೇ ಇದ್ರೆ ಏನಂತೆ, ಉಪ್ಪಿಟ್ಟಾದ್ರು ಮಾಡ್ಬಹುದಲ್ಲಾ ಅಂದ್ರು. ಜೊತೆಗೆ ವಿಜಯ್ ಡೈರೆಕ್ಷನ್ ಕ್ಯಾಪ್ ಧರಿಸ್ತಾ ಇರೋದಕ್ಕೆ ವಿಶ್ ಮಾಡಿದ್ರು.

LEAVE A REPLY

Please enter your comment!
Please enter your name here