Home ಸಿನಿ ಪವರ್ ನಂಗೆ ರೈಸ್​​​, ದಾಲ್​  ಗೊತ್ತು ಡ್ರಗ್ಸ್ ಗೊತ್ತಿಲ್ಲ : ಕಿಚ್ಚ ಸುದೀಪ್

ನಂಗೆ ರೈಸ್​​​, ದಾಲ್​  ಗೊತ್ತು ಡ್ರಗ್ಸ್ ಗೊತ್ತಿಲ್ಲ : ಕಿಚ್ಚ ಸುದೀಪ್

ತುಮಕೂರು : ನಂಗೆ ರೈಸ್​, ದಾಲ್ ಗೊತ್ತು ಡ್ರಗ್ಸ್​​ ಗೊತ್ತಿಲ್ಲ ಅಂತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ, ಸ್ಯಾಂಡಲ್​​ವುಡ್​​​​ ಡ್ರಗ್ಸ್ ಕಳಂಕದ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದರು.  ನಂಗೆ ಡ್ರಗ್ಸ್​​ ವಿಚಾರವಾಗಿ ಏನೂ ಗೊತ್ತಿಲ್ಲ. ಚಿತ್ರರಂಗವನ್ನು  ಎಲ್ಲರೂ ಸೇರಿ ಕಟ್ಟಿದ್ದಾರೆ. ಗೊತ್ತಿರದ ವಿಚಾರವಾಗಿ ನಾನು ಮಾತನಾಡುವುದಿಲ್ಲ. ನಮಗೆ ರೈಸ್​, ದಾಲ್​​ ಬಗ್ಗೆ ಗೊತ್ತಿದೆ. ಡ್ರಗ್ಸ್​​ ಬಗ್ಗೆ ಗೊತ್ತಿಲ್ಲ ಎಂದರು.

ಚಿರಂಜೀವಿ ಸರ್ಜಾ ವಿರುದ್ಧ ಕೇಳಿಬಂದಿರೋ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಚಿರಂಜೀವಿ ಸರ್ಜಾ ನನ್ನ ತಮ್ಮನ ಹಾಗೆ. ಚಿರು ಕುಟುಂಬವನ್ನು ಅವರ ಪಾಡಿಗೆ ಬಿಡಿ ಎಂದು ಹೇಳಿದರು.

ಪ್ರಶಾಂತ್ ಸಂಬರಗಿ ಯಾರು ಅಂತ ನಂಗೆ ಗೊತ್ತಿಲ್ಲ. ಚಿರಂಜೀವಿ ಸರ್ಜಾ ವಿಚಾರ ಮಾತನಾಡುವುದು ಬೇಡ. ಆಗಾಗ ಕನ್ನಡ ಚಿತ್ರರಂಗ ಬೀದಿಗೆ ಬರುತ್ತಲೇ ಇದೆ. ಬೀದಿಗೆ ಬಿದ್ದಾಗಲೆಲ್ಲಾ ಚಿತ್ರರಂಗ ಹೋರಾಟ ನಡೆಸಿದೆ ಎಂದರು.

ಇಂದ್ರಜಿತ್ ಲಂಕೇಶ್ ಜೊತೆ ಮಠಕ್ಕೆ ಭೇಟಿ :  ಸುದೀಪ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 1996ರಿಂದಲೂ ನಾನು ಹಾಗೂ ಇಂದ್ರಜಿತ್ ಆಪ್ತರು. ನಾನು ಅವರನ್ನು ಅವಲಂಬಿಸಿಲ್ಲ. ಅವರು ನನ್ನ ಅವಲಂಬಿಸಿಲ್ಲ. ನಾಳೆ ನನ್ನ ಹುಟ್ಟುಹಬ್ಬದ  ಹಿನ್ನೆಲೆಯಲ್ಲಿ ಭೇಟಿಯಾಗಿದ್ದೇವಷ್ಟೇ ಎಂದು  ಹೇಳಿದರು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments