‘ಪೊಗರು’ ಅಖಾಡದಲ್ಲಿದ್ದ ರಾಘಣ್ಣ ‘ಕೋಟಿಗೊಬ್ಬ’ ಸೆಟ್​​​ನಲ್ಲಿ..!

0
306

ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್ ಕಮ್​ಬ್ಯಾಕ್ ಆದ್ಮೇಲೆ ಒಂದಲ್ಲ ಒಂದು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ರಾಘಣ್ಣ ಮಿಂಚುತ್ತಿದ್ದಾರೆ. ಸದ್ಯ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್ ನಡೀತಾ ಇದೆ.
ಇನ್ನು ರಾಮೋಜಿ ಫಿಲ್ಮ್​ ಸಿಟಿಯಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರೀಕರಣ ನಡೀತಾ ಇದೆ. ಅಕ್ಕ-ಪಕ್ಕದಲ್ಲೇ ಶೂಟಿಂಗ್ ನಡೀತಾ ಇದೆ. ಹೀಗಾಗಿ ರಾಘಣ್ಣ ಕೋಟಿಗೊಬ್ಬ ಸೆಟ್​ಗೆ ಆಗಮಿಸಿ ಸುದೀಪ್​ರನ್ನು ಭೇಟಿಯಾಗಿದ್ದಾರೆ. ಸುದೀಪ್ ಪ್ರೀತಿಯಿಂದ ರಾಘಣ್ಣನ ಕುಶಾಲೋಪರಿ ವಿಚಾರಿಸಿದ್ದಾರೆ. ರಾಘಣ್ಣ ಭೇಟಿಗೆ ಸುದೀಪ್ ಕೂಡ ಬಹಳ ಖುಷಿಯಾಗಿದ್ದಾರೆ.

LEAVE A REPLY

Please enter your comment!
Please enter your name here