ಹುಟ್ಟುಹಬ್ಬದಂದು ಹೊಸ ಸಿನಿಮಾ ಸಿಕ್ರೇಟ್ ಬಿಚ್ಚಿಟ್ಟ ಕಿಚ್ಚ – ಜೋಗಿ ಪ್ರೇಮ್​ ಜೊತೆ ಮತ್ತೊಂದು ಸಿನಿಮಾ..!

0
1181

ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ 46ನೇ ಹುಟ್ಟುಹಬ್ಬದ ಸಂಭ್ರಮ. ಬರ್ತ್​ ಡೇ ಖುಷಿಯಲ್ಲಿರುವ ಕಿಚ್ಚ ಹೊಸ ಸಿನಿಮಾ ಬಗ್ಗೆ ಹೇಳಿದ್ದಾರೆ. ಪ್ರೊಡ್ಯೂಸರ್ ಕೆ.ಪಿ ಶ್ರೀಕಾಂತ್ ಅವರೊಡನೆ ಸಿನಿಮಾ ಮಾಡ್ತಿದ್ದೀನಿ. ಆ ಸಿನಿಮಾ ಬಗ್ಗೆ ಇನ್ನೂ ಮಾತುಕತೆ ಆಗ್ತಾ ಇದೆ ಅಂತ ಹೇಳಿದ ಸುದೀಪ್, ಜೋಗಿ ಪ್ರೇಮ್​ ಜೊತೆ ಮತ್ತೊಂದು ಸಿನಿಮಾ ಮಾಡೋ ಬಗ್ಗೆಯೂ ಹೇಳಿದ್ದಾರೆ.
ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅಭಿನಯದ ‘ದಿ ವಿಲನ್​’ಗೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದರು. ದಿ ವಿಲನ್ ಬಗ್ಗೆ ಒಂದಿಷ್ಟು ನೆಗಿಟೀವ್ ಕಾಮೆಂಟ್​ಗಳು ಬಂದಾಗ, ಸುದೀಪ್ ಇನ್ನು ಪ್ರೇಮ್​ ಸಿನಿಮಾ ಒಪ್ಪಿಕೊಳ್ಳಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ವು. ಈಗ ಸುದೀಪ್ ತಾವು ಮತ್ತೆ ಪ್ರೇಮ್ ಜೊತೆ ಸಿನಿಮಾ ಮಾಡೋದಾಗಿ ಹೇಳಿದ್ದಾರೆ.
”ಪ್ರೇಮ್ ನಂಗೆ ಒಳ್ಳೆಯ ಗೆಳೆಯ, ಸಹೋದರ…ಅವನೊಬ್ಬ ಒಳ್ಳೆಯ ವ್ಯಕ್ತಿ. ಒಳ್ಳೇ ವ್ಯಕ್ತಿಗಳ ಒಟ್ಟಿಗೆ ಕೆಲ್ಸ ಮಾಡೋಣ. ಅವ್ನು ಪ್ರೀತಿಯಿಂದ ಸಿನಿಮಾ ಮಾಡ್ತಾನೆ. ಎಲ್ಲಾ ಟೈಮ್​ನಲ್ಲೂ ಅದ್ಭುತ ಸಿನಿಮಾ ಮಾಡಕ್ಕೆ ಆಗಲ್ಲ. ಹಾಗಂತ ಅವ್ರು ಒಳ್ಳೇ ಸಿನಿಮಾಗಳನ್ನು ಕೊಟ್ಟಿಲ್ವಾ? ಎಂಥೆಂಥಾ ಸಿನಿಮಾ ಕೊಟ್ಟಿ ಅವ್ರು..! ಇಂಡಸ್ಟ್ರಿಗೆ ಅವರ ಕೊಡುಗೆ ಕೂಡ ಇದೆ. ಯಾವ ಟೈಮ್​ನಲ್ಲಿ ಬೇಕಾದ್ರು ಪ್ರೇಮ್ ಜೊತೆ ಸಿನಿಮಾ ಮಾಡೋಕೆ ರೆಡಿ” ಅಂದಿದ್ದಾರೆ ಸುದೀಪ್.

LEAVE A REPLY

Please enter your comment!
Please enter your name here