ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಸಿನಿಮಾ ಚಿತ್ರೀಕರಣ ಮುಂದೂಡಲಾಗಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಚಿತ್ರೀಕರಣ ಪ್ರಾರಂಭ ಮಾಡಿದೆ ಫ್ಯಾಂಟಮ್ ತಂಡ. ಈ ಮೂಲಕ ಕೊರೋನಾ ಬ್ರೇಕ್ ಬಳಿಕ ಚಿತ್ರೀಕರಣ ಪ್ರಾರಂಭಮಾಡಿದ ಮೊದಲ ಕನ್ನಡದ ಸಿನಿಮಾವಾಗಿದೆ.
ಯೆಸ್ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಕೊರೋನಾ ವೈರಸ್ ಹಾವಳಿಯ ನಡುವೆಯೂ ಸುದೀಪ್ ಮತ್ತು ತಂಡ ಧೈರ್ಯಮಾಡಿ ಚಿತ್ರೀಕರಣ ಶುರುಮಾಡಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ಹೈದರಾಬಾದ್ ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭ ಮಾಡಲಾಗಿದೆ. ಪೂಜೆಯ ಫೋಟೋವನ್ನು ಕಿಚ್ಚ ಸುದೀಪ್ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಕ್ರಮ್ ರೋಣನಾಗಿ ಸುದೀಪ್ ಅಬ್ಬರಿಸಲು ಸಜ್ಜಾಗಿದ್ದಾರೆ. ಫೋಟೋ ಜೊತೆಗೆ ಸುರಕ್ಷಿತವಾಗಿ ಚಿತ್ರೀಕರಣ ಮಾಡುವುದಾಗಿ ತಿಳಿಸಿದ್ದಾರೆ.
– ಮನೋಜ್ ವಿಜಯೀ೦ದ್ರ
#PhantomStartsRolling at hyd.
Every minute precautions've been taken care of by the production n its nicer to see great spirits and enthusiasm on set. Each available person is taking every necessary step to remain safe. Hoping for everything to sail through smoothly.
Best wshs🤗. pic.twitter.com/1IWKVXYVXw— Kichcha Sudeepa (@KicchaSudeep) July 16, 2020