‘ಪೈಲ್ವಾನ್’ ಸುದೀಪ್​ ಹೊಸ ಅವತಾರ ರಿವೀಲ್..!

0
232

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ್ದೇ ಹವಾ. ಟೀಸರ್ ಮತ್ತು ಪೋಸ್ಟರ್ ಗಳ ಮೂಲಕವೇ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ ‘ಪೈಲ್ವಾನ್’ ಈಗ ಮತ್ತೊಂದು ಜಬರ್ದಸ್ತ್​ ಸುದ್ದಿ ನೀಡಿದೆ.
ಹೌದು, ‘ಪೈಲ್ವಾನ್’ ಅಡ್ಡದಿಂದ ಮತ್ತೊಂದು ಪೋಸ್ಟರ್ ಬಿಡುಗಡೆಗೆಯಾಗಿದೆ. ಪೋಸ್ಟರ್ ನೋಡಿದ ಕಿಚ್ಚನ ಅಭಿಮಾನಿಗಳು ಸಕತ್ ಥ್ರಿಲ್ ಆಗಿದ್ದಾರೆ ಈ ಹೊಸ ಪೋಸ್ಟರ್ ನಲ್ಲಿ ಕಿಚ್ಚನ ಖಡಕ್ ಲುಕ್ ರಿವೀಲ್ ಆಗಿದೆ .
ಐದು ಭಾಷೆಯ ಸೂಪರ್ ಸ್ಟಾರ್ಸ್ ರಿಲೀಸ್ ಮಾಡಿದ್ದಾರೆ . ಚಿತ್ರತಂಡದಿಂದ ಪೋಸ್ಟರ್ ರಿಲೀಸ್ ಆದ ಚಿತ್ರದ ಮೇಲೆ ಅಭಿಮಾನಿಗಳ ಕಾತುರತೆ ಮತ್ತಷ್ಟು ಹೆಚ್ಚಾಗಿದೆ. ಕಿಚ್ಚನ ಮತ್ತೊಂದು ಪೈಲ್ವಾನ್ ಅವತಾರ ನೋಡಿದ ಮೇಲಂತೂ ಚಿತ್ರ ಬಿಡುಗಡೆಗೆ ಅಭಿಮಾನಿಗಳ ಕಾತುರತೆಗೆ ಮತ್ತಷ್ಟು ತೀವ್ರತೆ ಸಿಕ್ಕಿದೆ.
ವಿಶೇಷ ಅಂದ್ರೆ ‘ಪೈಲ್ವಾನ್’ ಸಿನಿಮಾ 8 ಭಾಷೆಯಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಐದು ಭಾಷೆಯ ಪೋಸ್ಟರ್ಸ್ ರಿಲೀಸ್ ಮಾಡಲಾಗಿದೆ . ಈ ಐದು ಭಾಷೆಯ ಬಾಕ್ಸಿಂಗ್ ಪೋಸ್ಟರ್ಸ್ ಅನ್ನು ಐದು ಭಾಷೆಯ ಸೂಪರ್ ಸ್ಟಾರ್ಸ್ ರಿಲೀಸ್ ಮಾಡಿರೋದು ಮತ್ತೊಂದು ವಿಶೇಷ. ಕನ್ನಡದಲ್ಲಿ ಸುದೀಪ್ ಅವರೇ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 
ಸುನೀಲ್ ಶೆಟ್ಟಿ ‘ಪೈಲ್ವಾನ್’ ಚಿತ್ರದಲ್ಲಿ ಸರ್ಕಾರ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಶೆಟ್ಟಿ ಅಭಿನಯದ ಮೊದಲ ಕನ್ನಡ ಸಿನಿಮಾ ಪೈಲ್ವಾನ್ .

ಪೈಲ್ವಾನ್’ ತೆಲುಗು ಪೋಸ್ಟರ್ ಅನ್ನು ಮೆಗಾ ಸ್ಟಾರ್ ಚಿರಂಜೀವಿ ರಿಲೀಸ್ ಮಾಡಿದ್ದಾರೆ . ಸುದೀಪ್ ಅವರ ‘ಪೈಲ್ವಾನ್’ ಅವತಾರ ನೋಡಿ ಸಂತಸ ಪಟ್ಟಿರುವ ಮೆಗಾ ಸ್ಟಾರ್ ಚಿತ್ರದ ತೆಲುಗು ಪೋಸ್ಟರ್ ಅನ್ನು ಟ್ವೀಟ್ ಮಾಡುವ ಮೂಲಕ ರಿಲೀಸ್ ಮಾಡಿದ್ದಾರೆ . ಚಿರಂಜೀವಿ ಅಭಿನಯದ ‘ಸೈರಾ’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಚಿತ್ರದ ತಮಿಳು ಪೋಸ್ಟರ್ ಅನ್ನು ವಿಜಯ್ ಸೇತುಪತಿ ರಿಲೀಸ್ ಮಾಡಿದ್ದಾರೆ . ಮೊದಲ ಬಾರಿಗೆ ವಿಜಯ್ ಸೇತುಪತಿ ಕನ್ನಡ ಸ್ಟಾರ್ ನಟನ ಚಿತ್ರದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿರೋದು ವಿಶೇಷ. ‘ಸೈರಾ’ ನರಸಿಂಹ ರೆಡ್ಡಿ ಚಿತ್ರದಲ್ಲಿ ವಿಜಯ್ ಸೇತುಪತಿ ಹಾಗೂ ಸುದೀಪ್ ಒಟ್ಟಿಗೆ ಅಭಿನಯಿಸಿದ್ದಾರೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಮಲಯಾಳಂ ಪೋಸ್ಟರ್ ಅನ್ನು ರಿವೀಲ್ ಮಾಡಿದ್ದಾರೆ . ಮೋಹನ್ ಲಾಲ್ ಮತ್ತು ಸುದೀಪ್ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಅಲ್ಲದೆ ಮೋಹನ್ ಲಾಲ್ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೀಗ ಮೋಹನ್ ಲಾಲ್ ಸುದೀಪ್ ಅವರ ಬಾಕ್ಸಿಂಗ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. 

ಪೈಲ್ವಾನ್’ ಬಾಕ್ಸಿಂಗ್ ಕನ್ನಡ ಪೋಸ್ಟರ್ ಅನ್ನು ಸ್ವತಹ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. ಮೊದಲ ಬಾರಿಗೆ ಸುದೀಪ್ ಈ ಪರಿ ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದಾರೆ. ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ‘ಪೈಲ್ವಾನ್’ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಆಗಸ್ಟ್ 8 ವರಮಹಾಲಕ್ಷ್ಮಿ ಹಬ್ಬದಿಂದ ‘ಪೈಲ್ವಾನ್’ ಅಬ್ಬರ ಶುರುವಾಗಲಿದೆ. ಹೆಬ್ಬುಲಿ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಕೃಷ್ಣ ‘ಪೈಲ್ವಾನ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆರ್ ಆರ್ ಆರ್ ಮೋಷನ್ ಪಿಕ್ಟರ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬಂದಿದೆ. 

 

LEAVE A REPLY

Please enter your comment!
Please enter your name here