Home ಸಿನಿ ಪವರ್ 'ದಿ ವಿಲನ್'​ ಬಗ್ಗೆ 'ಪೈಲ್ವಾನ್​' ಸುದೀಪ್ ಹೀಗಂದ್ರಾ..!

‘ದಿ ವಿಲನ್’​ ಬಗ್ಗೆ ‘ಪೈಲ್ವಾನ್​’ ಸುದೀಪ್ ಹೀಗಂದ್ರಾ..!

ಚಂದನವನದ ಪ್ರೀತಿಯ ‘ಚಂದು’ ಕನ್ನಡ ಮಾತ್ರವಲ್ಲದೆ ಟಾಲಿವುಡ್, ಬಾಲಿವುಡ್​ ಅಷ್ಟೇ ಅಲ್ಲ ಹಾಲಿವುಡ್​ನಲ್ಲೂ ಮಿಂಚುತ್ತಿರೋ ‘ಮಾಣಿಕ್ಯ’. ಇವರ ಸಿನಿಮಾಗಳಿಗೆ ಇವತ್ತು ಇಡೀ ದೇಶದಲ್ಲಿ ಮಾರುಕಟ್ಟೆ ಇದೆ..! ವಿಶ್ವದಾದ್ಯಂತ ಕಿಚ್ಚನಿಗೆ ಬಹು ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿಯೇ ‘ಪೈಲ್ವಾನ್​’ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ..! ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲೂ ‘ಪೈಲ್ವಾನ್​’ ಎಂಟ್ರಿಗೆ ಅಖಾಡ ಸಿದ್ಧವಾಗಿದೆ.
‘ಹೆಬ್ಬುಲಿ’ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್​ನ ‘ಪೈಲ್ವಾನ್​’ ಆಗಸ್ಟ್ 29ಕ್ಕೆ ರಿಲೀಸ್ ಆಗ್ತಿದೆ. ಪೋಸ್ಟರ್, ಟೀಸರ್​​ಗಳಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ‘ಪೈಲ್ವಾನ್’ ಈಗ ಹಾಡುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡ್ತಾ ಇದೆ. ಹೀಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದ್ದು, ಕಿಚ್ಚನ ಫ್ಯಾನ್ಸ್​​ ಅಂತ ‘ಪೈಲ್ವಾನ್’ ಎಂಟ್ರಿಗೆ ತುದಿಗಾಲಲ್ಲಿ ಕಾಯ್ತಿದ್ದಾರೆ.
ಪೈಲ್ವಾನ್ ರಿಲೀಸ್ ಡೇಟ್ ಫಿಕ್ಸ್ ಆದ ಬೆನ್ನಲ್ಲೇ ‘ಕೋಟಿಗೊಬ್ಬ-3’ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಕಿಚ್ಚ, ಕೋಟಿಗೊಬ್ಬ3 ಸೆಟ್​ಗೆ ಎಂಟ್ರಿ ಕೊಡೋ ಮುಂಚೆ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ..! ಕಿಚ್ಚ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ನಟಿಸದಿರಲು ಡಿಸೈಡ್ ಮಾಡಿದ್ದಾರೆ. ಕಿಚ್ಚನ ಈ ತೀರ್ಮಾನಕ್ಕೆ ಕಾರಣ ‘ದಿ ವಿಲನ್’..!
ಸುದೀಪ್ ಈ ಹಿಂದೆ 2008ರಲ್ಲಿ ರಾಕ್​ಲೈನ್ ವೆಂಕಟೇಶ್ ಅವರ ಜೊತೆ ಮಲ್ಟಿ ಹೀರೋ ಸಿನಿಮಾ ಕಾಮಣ್ಣನ ಮಕ್ಕಳು, 2013ರಲ್ಲಿ ಚಿರಂಜೀವಿ ಸರ್ಜಾ ಜೊತೆ ವರದನಾಯಕ ಹಾಗೂ 2016ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಮುಕುಂದ ಮುರಾರಿ ಸಿನಿಮಾದಲ್ಲಿ ನಟಿಸಿದ್ರು. ಆ ಬಳಿಕ 2018ರಲ್ಲಿ ತೆರೆಕಂಡ ದಿ ವಿಲನ್​ನಲ್ಲಿ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಜೊತೆ ಕಿಚ್ಚ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು. ಬಹುಶಃ ಸದ್ಯಕ್ಕೆ ಸುದೀಪ್ ಅಭಿನಯದ ಕೊನೆಯ ಮಲ್ಟಿ ಸ್ಟಾರ್ ಮೂವಿ ವಿಲನ್ನೇ ಆಗಬಹುದು.!
ಯೆಸ್​, ಪೈಲ್ವಾನ್ ಪ್ರೆಸ್​ಮೀಟ್ ವೇಳೆ ಸುದೀಪ್ ಈ ವಿಷಯವನ್ನು ಹೇಳಿದ್ದಾರೆ. ಇಬ್ರು ಸ್ಟಾರ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವಾಗ ತುಂಬಾ ಹುಷಾರಾಗಿರ್ಬೇಕು. ವಿಲನ್ ರಿಲೀಸ್ ಆದ್ಮೇಲೆ ಶಿವಣ್ಣನ ಅಭಿಮಾನಿಗಳಿಗೆ ಬೇಜಾರಾಗಿತ್ತು. ಹೀಗಾಗುತ್ತೆ ಅಂತ ನಾನಾಗಲಿ, ಶಿವಣ್ಣ ಆಗಲಿ ಅಥವಾ ಡೈರೆಕ್ಟರ್ ಪ್ರೇಮ್ ಅವರಾಗಲಿ ಯೋಚಿಸಿರ್ಲಿಲ್ಲ ಎಂದಿದ್ದಾರೆ. ಇದರೊಂದಿಗೆ ಮುಂದೆ ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ನಟಿಸಲ್ಲ ಅನ್ನೋ ಸೂಚನೆಯನ್ನು ಕೊಟ್ಟಿದ್ದಾರೆ.

ದಿ ವಿಲನ್ ಒಂದು ಲೆವೆಲ್​ಗೆ ಹಿಟ್ ಆಗಿತ್ತಾದ್ರೂ ಶಿವಣ್ಣನ ಅಭಿಮಾನಿಗಳಂತೂ ನೇರಾನೇರ ಡೈರೆಕ್ಟರ್ ಪ್ರೇಮ್​ ವಿರುದ್ಧ ಕಿಡಿಕಾರಿದ್ದರು. ಸಿನಿಮಾ ಸುದೀಪ್, ಶಿವಣ್ಣ ಅಭಿಮಾನಿಗಳು ನಿರೀಕ್ಷಿಸಿ ಮಟ್ಟದಲ್ಲಿರಲಿಲ್ಲ. ಈ ಕಾರಣದಿಂದಲೇ ಸುದೀಪ್ ಹಿಂದೊಮ್ಮೆ ಬರೀ ಮಲ್ಟಿ ಸ್ಟಾರ್ ಸಿನಿಮಾ ಮಾಡ್ತಿದ್ರೆ ಆಗಲ್ಲ ಅನ್ನೋ ಅರ್ಥದಲ್ಲೂ ಮಾತಾಡಿದ್ದಿದೆ. ಇದೀಗ ನೇರವಾಗಿ ದಿ ವಿಲನ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಅನ್ನೋ ಮಾತನ್ನು ಹೇಳುವ ಮೂಲಕ ಸದ್ಯಕ್ಕೆ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ನಟಿಸಲ್ಲ ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ. ಒಂದು ವೇಳೆ ಸುದೀಪ್ ಇನ್ನು ಮಲ್ಟಿ ಸ್ಟಾರ್ ಸಿನಿಮಾ ಮಾಡೋದಿದ್ರು ಪಕ್ಕಾ ತುಂಬಾ ಚೂಸಿ ಆಗಿರ್ತಾರೆ ಅನ್ನೋದ್ರಲ್ಲಿ ನೋ ಡೌಟು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments