Home ಸಿನಿ ಪವರ್ ಸಿನಿಮಾ ಹೀರೋನಂತೆ ನಾನ್ಯಾರಿಗೂ ಎಚ್ಚರಿಕೆ ನೀಡಲ್ಲ : ಕಿಚ್ಚ ಸುದೀಪ್

ಸಿನಿಮಾ ಹೀರೋನಂತೆ ನಾನ್ಯಾರಿಗೂ ಎಚ್ಚರಿಕೆ ನೀಡಲ್ಲ : ಕಿಚ್ಚ ಸುದೀಪ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳನ್ನು ಯಾರೂ ಕೆಣಕ ಬೇಡಿ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್​ ಸಿನಿಮಾ ಬಿಡುಗಡೆಯಾದ ಬಳಿಕ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದಾರೆ. ಟ್ವೀಟ್​ನಲ್ಲಿ ತಮ್ಮ ಪತ್ರದ ಲಿಂಕ್ ಹಾಕಿರುವ ಸುದೀಪ್​, ಸಿನಿಮಾ ಹೀರೋನಂತೆ ನಾನ್ಯಾರಿಗೂ ಎಚ್ಚರಿಕೆ ನೀಡಲ್ಲ. ಪೈಲ್ವಾನ್ ಪೈರೆಸಿಗೆ ಸಂಬಂಧಿಸಿದಂತೆ ನಾವ್ಯಾರು ಯಾವ ನಟನ ಹೆಸರನ್ನೂ ಪ್ರಸ್ತಾಪಿಸಿಲ್ಲ. ನಿನ್ನೆ ನಮ್ಮ ನಿರ್ಮಾಪಕರು ಪೈಲ್ವಾನ್​ ಪೈರೆಸಿಗೆ ಆ ನಟನ ಅಭಿಮಾನಿಗಳು ಕಾರಣರಲ್ಲ ಅಂತಲೇ ಹೇಳಿದ್ದಾರೆ ಮತ್ತು ಹೇಳುತ್ತಿದ್ದಾರೆ. ಹಾಗಂತ ಪೈರೆಸಿ ಆಗಿಲ್ಲ ಅಂತ ಅರ್ಥವಲ್ಲ. ತುಂಬಾ ದೊಡ್ಡಮಟ್ಟದ ಪೈರೆಸಿಯಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲಿಂಕ್ ಗಳನ್ನು ಹರಿಬಿಟ್ಟಿದ್ದಾರೆ. ಅವರೆಲ್ಲರ ಹೆಸರುಗಳನ್ನು ನಾವು ಸೈಬರ್ ಗೆ ಕೊಟ್ಟಿದ್ದೇವೆ ಎಂದಿದ್ದಾರೆ.

ಸುದೀಪ್ ಪತ್ರದಲ್ಲೇನಿದೆ?

ಎಲ್ಲಾ ನನ್ನ ಸ್ನೇಹಿತರಲ್ಲೊಂದು ಮನವಿ..

ಪೈಲ್ವಾನ್​​ ಬಿಡುಗಡೆಯಾದ ಕ್ಷಣದಿಂದ ಸುಮಾರು ವಿಷಯಗಳು ಸಂಭವಿಸುತ್ತಿವೆ. ಆದರೆ ಇವ್ಯಾವು ಒಳ್ಳೆಯ ಲಕ್ಷಣಗಳು ಅಂತ ನನಗನ್ನಿಸುತ್ತಿಲ್ಲ. ಹಾಗೆ ಎಲ್ಲಾ ಸಂದರ್ಭದಲ್ಲೂ, ಎಲ್ಲದಕ್ಕೂ ಉತ್ತರಿಸುತ್ತಾ ಕೂರುವುದು ಕೂಡ ಒಳ್ಳೆಯದಲ್ಲ. ಕೆಲವೊಂದು ಸಲ ಕುರುಡನ ಹಾಗೆ, ಕಿವುಡನ ಹಾಗೆ ಇದ್ದುಬಿಟ್ಟರೆ ಅದೆಷ್ಟೋ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳಬಹುದು. ನಿಮ್ಮ ಬದುಕಗಳ ಕಡೆ ಗಮನಹರಿಸಿ, ಒಳ್ಳೆಯದನ್ನು ಮಾಡಿ ಇಂತಹುವುಗಳ ಬಗ್ಗೆ ತಲೆಕೆಡಸಿಕೊಳ್ಳಬೇಡಿ.. ಏಕೆಂದರೆ ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ, ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ.

ಪೈಲ್ವಾನ್ ಪೈರೆಸಿಗೆ ಸಂಬಂಧಿಸಿದಂತೆ ನಾವ್ಯಾರು ಯಾವ ನಟನ ಹೆಸರನ್ನೂ ಪ್ರಸ್ತಾಪಿಸಿಲ್ಲ. ನಿನ್ನೆ ನಮ್ಮ ನಿರ್ಮಾಪಕರು ಪೈಲ್ವಾನ್​ ಪೈರೆಸಿಗೆ ಆ ನಟನ ಅಭಿಮಾನಿಗಳು ಕಾರಣರಲ್ಲ ಅಂತಲೇ ಹೇಳಿದ್ದಾರೆ ಮತ್ತು ಹೇಳುತ್ತಿದ್ದಾರೆ. ಹಾಗಂತ ಪೈರೆಸಿ ಆಗಿಲ್ಲ ಅಂತ ಅರ್ಥವಲ್ಲ. ತುಂಬಾ ದೊಡ್ಡಮಟ್ಟದ ಪೈರೆಸಿಯಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲಿಂಕ್ ಗಳನ್ನು ಹರಿಬಿಟ್ಟಿದ್ದಾರೆ. ಅವರೆಲ್ಲರ ಹೆಸರುಗಳನ್ನು ನಾವು ಸೈಬರ್ ಗೆ ಕೊಟ್ಟಿದ್ದೇವೆ ಕೂಡ. ಆದರೆ ಇದರಿಂದ ಕನ್ನಡ ಸಿನಿಮಾವೊಂದಕ್ಕೆ ಆದ ನಷ್ಟವೆಷ್ಟು? ಉತ್ಸಾಹ ಕಳೆದುಕೊಂಡ ಸಿನಿಕರ್ಮಿಗಳೆಷ್ಟು? ಎಂಬುದನ್ನು ಯಾರಾದರೂ ಯೋಚಿಸಿದ್ದಾರಾ? ಇಲ್ಲ ಅವರಿಗೆ ಮತ್ತೊಬ್ಬರ ಅವಸಾನವನ್ನು ನೋಡಲು ಇರುವಷ್ಟು ಕಾತುರ ಒಳ್ಳೆಯದನ್ನು ಮಾಡುವಾಗ ಇರುವುದಿಲ್ಲ. ನನ್ನ ಹೆಸರನ್ನು ತಮಾಷೆಯಾಗಿ ಮಾಡಿಕೊಂಡಾಗ ಸಿಗುವಷ್ಟು ಸಮಾಧಾನ ಎತ್ತರದಲ್ಲಿ ನಿಂತಾಗ ಸಿಗುವುದಿಲ್ಲ. ಇಂತಹವುಗಳನ್ನು ನೋಡಿದಾಗ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ಆದರೆ ನೆನಪಿರಲಿ ನಾನು ಇಂತಹವುಗಳಿಂದ ಅಧೀರನಾಗುವುದಿಲ್ಲ, ಸಣ್ಣನಾಗುವುದಿಲ್ಲ. ನನ್ನ ಸಿನಿಮಾ ಮತ್ತು ನಿರ್ಮಾಪಕರನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ನಾನು ಟ್ವೀಟ್ ಮಾಡಿರುವುದು ನಿಜ. ಆದರೆ ಅದು ಯಾವುದೇ ನಟನ ಬಗ್ಗೆ ಅಲ್ಲ. ನಮ್ಮ ಸಿನಿಮಾದ ಪೈರೆಸಿ ಮಾಡಿದವರ ಬಗ್ಗೆ. ಅದನ್ನು ಇವರು ತಮಗ್ಯಾಕೆ ಅನ್ವಯಿಸಿಕೊಂಡರೋ ನನಗೆ ಅರ್ಥವಾಗುತ್ತಿಲ್ಲ.

ಇದರಾಚೆಗೂ.. ನನ್ನ ಪೈಲ್ವಾನ್ ಸಿನಿಮಾಗೆ ಅಭಿಮಾನಿ ಸ್ನೇಹಿತರಾದ ನೀವು ತೋರಿದ ಪ್ರೀತಿ. ಇಂಡಸ್ಟ್ರಿಯ ಸಹೋದ್ಯೋಗಿಗಳು ತೋರಿದ ಪ್ರೋತ್ಸಾಹವನ್ನು ಖಂಡಿತವಾಗಿಯೂ ಮರೆಯಲಾಗುವುದಿಲ್ಲ. ಇನ್ನೂ ನಾನು ಏನಾದರೂ ಪ್ರೂವ್ ಮಾಡಿಕೊಳ್ಳುವ ಅಗತ್ಯವಿದೆ ಅಂತ ನನಗೀಗ ಅನ್ನಿಸುತ್ತಿಲ್ಲ. ಸಿನಿಮಾದ ಹೀರೋ ತರ ನಾನು ಯಾರಿಗೂ ಎಚ್ಚರಿಕೆ ಕೊಡುವುದಿಲ್ಲ ಏಕೆಂದರೆ ಅದು ಈಗ ನನ್ನ ಸ್ವಭಾವವಲ್ಲ. ಅಫ್​​ಕೋರ್ಸ್ ಒಂದು ಕಾಲಕ್ಕೆ ನಾನೂ ಆ ತರ ಇದ್ದೆ. ತುಂಬಾ ವಿಷಯಗಳಲ್ಲಿ ಖಾರವಾಗಿಯೇ ಮಾತನಾಡುತ್ತಿದ್ದೆ. ಕೆಲವರ ಬಗ್ಗೆ ರೋಷದಿಂದಲೂ ಟೀಕಿಸಿದ್ದೆ ಆದರೆ ಬದುಕಿನ ಪಯಣ ನನ್ನ ಅರಿವಿನ ಮಿತಿಯನ್ನು ವಿಸ್ತರಿಸುತ್ತಾ ಹೋದಂತೆ ನಾನೂ ಬದಲಾಗುತ್ತಾ ಹೋದೆ. ಅಷ್ಟೇ ಏಕೆ ನನ್ನ ಖಾಸಗಿ ಬದುಕಿನಲ್ಲೇ ಅನೇಕ ತೊಂದರೆಗಳಿದ್ದವು ಅವನ್ನು ಕೂಡ ಸರಿಪಡಿಸಿಕೊಂಡು ಮುನ್ನಡಿ ಇಡುವ ಪ್ರಯತ್ನವನ್ನು ಮಾಡಿದೆ. ತಪ್ಪನ್ನು ಎಲ್ಲರೂ ಮಾಡ್ತಾರೆ ಆದ್ರೆ ತಿದ್ದಿಕೊಂಡು ಹೋಗುವುದು ತಾನೇ ಮನುಷ್ಯತ್ವ. ನಾನೂ ಹಾಗೇ ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂಬ ಹಂಬಲದಿಂದ ದ್ವೇಷ, ರೋಷಗಳ ಜಾಗದಲ್ಲಿ ಪ್ರೀತಿ, ವಿಶ್ವಾಸಗಳ ಬೆಳೆಯನ್ನು ಬಿತ್ತಿದೆ. ನಾನು ಕ್ಷಮೆ ಕೇಳಲು ಮತ್ತು ಕ್ಷಮೆಯನ್ನು ಒಪ್ಪಿಕೊಳ್ಳಲು ಯಾವತ್ತೂ ಮುಜುಗರಪಡಲಿಲ್ಲ. ನನ್ನ ಆ ನಿರ್ಧಾರ ಫಲ ಕೊಡುವ ಸಂದರ್ಭದಲ್ಲಿ ಮತ್ತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುವ ಅಗತ್ಯವಿದೆಯಾ ನೀವೇ ಹೇಳಿ.. ಅವತ್ತು ಕೆಲವರನ್ನು ಟೀಕಿಸಿದ್ದೂ ಸಾರ್ವಜನಿಕವಾಗಿಯೇ! ಇವತ್ತು ಅವರನ್ನು ಒಪ್ಪಿ, ಅಪ್ಪಿರುವುದೂ ಸಾರ್ವಜನಿಕವಾಗಿಯೇ.. ನಾನು ಇದುವರೆಗೆ ಏನು ಸಂಪಾದಿಸಿದ್ದೆನೆಯೋ ಅದೆಲ್ಲವೂ ನನ್ನ ಕೆಲಸ, ಪ್ರೀತಿ, ವಿಶ್ವಾಸಗಳಿಂದಲೇ ಎಂಬುದನ್ನು ಎಲ್ಲರೂ ಬಲ್ಲಿರಿ. ಪರಸ್ಪರ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳುವುದರಲ್ಲಿ ನನಗೆ ಆನಂದವಿದೆ ಅದನ್ನೇ ಮುಂದುವರಿಸುತ್ತೇನೆ. ತುಂಬಾ ಕಡಿಮೆ ಸಮಯ ನಾವು ಈ ಭೂಮಿಯಲ್ಲಿರುತ್ತೇವೆ. ಆ ಸಮಯವನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಜವಬ್ದಾರಿ ನನ್ನ ಮೇಲಿದೆ. ಆದ್ದರಿಂದ ಎಲ್ಲವನ್ನೂ ಮರೆತು ಹೊಸ ಉತ್ಸಾಹದಿಂದ ಮುನ್ನುಗ್ಗಿ. ಹರಿವ ನದಿ ನಿಲ್ಲಬಾರದಲ್ಲವೇ ಸ್ನೇಹಿತರೇ..

ಈ ಸಂದರ್ಭದಲ್ಲಿ “ಜಗತ್ತನ್ನೇ ಗೆದ್ದು ಬರಿಗೈನಲ್ಲಿ ಹೊರಟ” ಅಲೆಗ್ಸಾಂಡರ್ ನೆನಪಾಗುತ್ತಿದ್ದಾನೆ. ಅಲೆಗ್ಸಾಂಡರ್ ಬದುಕಿನ ನೀತಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಲಬೇಕಿದೆ..ಈ ಜಗತ್ತಿಗೆ ನಾವು ಕೊಟ್ಟು ಹೋಗುವುದು ನಮ್ಮ ನೆನಪುಗಳೇ ಹೊರತು ಮತ್ತೇನಲ್ಲ.. ಆದರೆ ಆ ನೆನಪುಗಳು ಒಳ್ಳೆಯದಾಗಿರಬೇಕೆಂಬುದು ನನ್ನ ಆಸೆ..

– ಕಿಚ್ಚ ಸುದೀಪ

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments