Sunday, May 29, 2022
Powertv Logo
Homeಸಿನಿಮಾಕಿಚ್ಚ ಸುದೀಪ್​​ಗೆ ದಾದಾ ಸಾಹೇಬ್​​ ಫಾಲ್ಕೆ ಇಂಟರ್​ನ್ಯಾಷನಲ್ ಅವಾರ್ಡ್

ಕಿಚ್ಚ ಸುದೀಪ್​​ಗೆ ದಾದಾ ಸಾಹೇಬ್​​ ಫಾಲ್ಕೆ ಇಂಟರ್​ನ್ಯಾಷನಲ್ ಅವಾರ್ಡ್

 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದಿದೆ. ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ ಅವಾರ್ಡ್ 2020ರ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್’ ಪ್ರಶಸ್ತಿಗೆ ಸ್ಯಾಂಡಲ್​​ವುಡ್​​ ‘ರನ್ನ’ ಪಾತ್ರರಾಗಿದ್ದಾರೆ.
‘ದಬಾಂಗ್​ -3’ ಸಿನಿಮಾದ ಅಭಿನಯಕ್ಕೆ ಚಂದನವನದ ‘ಚಂದು’ಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ದಾದಾ ಸಾಹೇಬ್ ಮತ್ತು ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಗುರುವಾರ ಮುಂಬೈನ ತಾಜ್​​ ಲ್ಯಾಂಡ್ಸ್​ ಎಂಡ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್​ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಈ ಬಗ್ಗೆ ಟ್ವೀಟ್ ಮೂಲಕ ಖುಷಿ ಹಂಚಿಕೊಂಡಿರುವ ಸುದೀಪ್, ಸಿನಿಮಾ ತಂಡ ಸೇರಿದಂತೆ ತಮ್ಮ ಕುಟುಂಬ, ತಮ್ಮ ಸಹ ಕಲಾವಿದರು, ಸಿನಿಮಾ ತಂತ್ರಜ್ಞರಿಗೆ ಹಾಗೂ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಗಮನಿಸಬೇಕಾದ ಅಂಶವೆಂದರೆ ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಂಬಂಧವಿಲ್ಲ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments