‘ಪೈಲ್ವಾನ್​’ ಗೆ 4 ಭಾಷೆಗಳಲ್ಲಿ ಸ್ವತಃ ಕಿಚ್ಚನದ್ದೇ ಧ್ವನಿ..!

0
358

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಪೈಲ್ವಾನ್​’ ಆಗಿ ತನ್ನ ಖದರ್ ತೋರಿಸುತ್ತಿದ್ದಾರೆ. ಸೆಪ್ಟೆಂಬರ್ 12ರಿಂದ ಕಿಚ್ಚನ ಬಹು ನಿರೀಕ್ಷಿತ ‘ಪೈಲ್ವಾನ್​’ ಅಬ್ಬರ ಶುರುವಾಗಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ‘ಪೈಲ್ವಾನ್​’ ದರ್ಶನವಾಗುತ್ತಿದೆ.
‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಡೈರೆಕ್ಟರ್ ಕೃಷ್ಣ ಮತ್ತು ಸ್ಯಾಂಡಲ್​ವುಡ್ ಬಾದ್ ಷಾ ಕಿಚ್ಚ ಸುದೀಪ್ ಕಾಂಬಿನೇಷನ್​ನ ಈ ಸಿನಿಮಾ ಪೋಸ್ಟರ್, ಟೀಸರ್, ಟ್ರೈಲರ್​ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಸೆಪ್ಟೆಂಬರ್ 12ರಿಂದ ಸಿನಿಮಾ ಬಾಕ್ಸ್​ ಆಫೀಸಲ್ಲಿ ಅಬ್ಬರ ಆರಂಭಿಸಲಿದೆ.
ಇನ್ನು ಪಂಚ ಭಾಷೆಗಳಲ್ಲಿ ರಿಲೀಸ್ ‘ಪೈಲ್ವಾನ್​’ ತೆರೆಕಾಣುತ್ತಿದ್ದು ಕನ್ನಡದಲ್ಲಿ ಹೇಗಿದ್ರು ಸುದೀಪ್ ಗೆ ಸುದೀಪೇ ಧ್ವನಿ..! ಉಳಿದ ಭಾಷೆಗಳಲ್ಲಿ ಕಿಚ್ಚನಿಗೆ ಕಂಠದಾನ ಯಾರದ್ದು ಅನ್ನುವ ಕುತೂಹಲವಿತ್ತು. ಇದೀಗ ಆ ಕುತೂಹಲವನ್ನು ಸ್ವತಃ ಸುದೀಪ್​ ಅವರೇ ತಣಿಸಿದ್ದಾರೆ.
ಟ್ವಿಟರ್​​​​​ ಇಂಡಿಯಾದ ಟ್ಟಿಟರ್ ಬ್ಲೂ ರೂಂನಿಂದ ಲೈವ್ ಬಂದಿದ್ದ ಸುದೀಪ್ ಪೈಲ್ವಾನ್ ಬಗ್ಗೆ ಮಾತಾಡಿದ್ರು. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ನಾನೇ ಡಬ್ ಮಾಡಿದ್ದೇನೆ. ಕನ್ನಡ ನಮ್ಮ ಭಾಷೆ.. ಹೀಗಾಗಿ ಡಬ್ಬಿಂಗ್ ಸುಲಭವಾಗಿತ್ತು. ಹಿಂದಿ ಡಬ್ ಸ್ವಲ್ಪ ಕಷ್ಟ ಆಗಿತ್ತು. ಮಲೆಯಾಳಂ ಮಾತ್ರ ಟ್ರೈ ಮಾಡೋಕೇ ಹೋಗ್ಲಿಲ್ಲ ಅಂದರು.

LEAVE A REPLY

Please enter your comment!
Please enter your name here