Saturday, October 1, 2022
Powertv Logo
Homeಸಿನಿಮಾಸುದೀಪ್​ಗೆ ದಾದಾ ಸಾಹೇಬ್​ ಫಾಲ್ಕೆ ಇಂಟರ್ನ್ಯಾಷನಲ್​​ ಅವಾರ್ಡ್..!

ಸುದೀಪ್​ಗೆ ದಾದಾ ಸಾಹೇಬ್​ ಫಾಲ್ಕೆ ಇಂಟರ್ನ್ಯಾಷನಲ್​​ ಅವಾರ್ಡ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ಗೆ ಹಿರಿಮೆಗೆ ಮತ್ತೊಂದು ಗರಿ ಸೇರಿದೆ. ಸುದೀಪ್ ನಟನೆಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದಿದೆ. ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ ಅವಾರ್ಡ್ 2020ರ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್’ ಪ್ರಶಸ್ತಿಗೆ ಸ್ಯಾಂಡಲ್​​ವುಡ್​​ ‘ರನ್ನ’ ಪಾತ್ರರಾಗಿದ್ದಾರೆ.
‘ದಬಾಂಗ್​ -3’ ಸಿನಿಮಾದ ಅಭಿನಯಕ್ಕೆ ಚಂದನವನದ ‘ಚಂದು’ಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ದಾದಾ ಸಾಹೇಬ್ ಮತ್ತು ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಫೆಬ್ರವರಿ 20ರಂದು ಮುಂಬೈನ ತಾಜ್​​ ಲ್ಯಾಂಡ್ಸ್​ ಎಂಡ್​​ನಲ್ಲಿ ನಡೆಯಲಿರೋ ಕಾರ್ಯಕ್ರಮಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇನ್ನು ಗಮನಿಸಬೇಕಾದ ಅಂಶವೆಂದರೆ ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಂಬಂಧವಿಲ್ಲ.

- Advertisment -

Most Popular

Recent Comments