Home ಸಿನಿ ಪವರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ | ಅಭಿಮಾನಿಗಳಲ್ಲಿ ಅಭಿನಯ ಚಕ್ರವರ್ತಿ ಮಾಡಿರೋ ಮನವಿ ಏನ್ ಗೊತ್ತಾ?

ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ | ಅಭಿಮಾನಿಗಳಲ್ಲಿ ಅಭಿನಯ ಚಕ್ರವರ್ತಿ ಮಾಡಿರೋ ಮನವಿ ಏನ್ ಗೊತ್ತಾ?

ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್..! ಅಭಿಮಾನಿಗಳಲ್ಲಿ ಅಭಿನಯ ಚಕ್ರವರ್ತಿ ಮಾಡಿರೋ ಮನವಿ ಏನ್ ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ಗೆ ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್​​ವುಡ್ `ಮಾಣಿಕ್ಯ’  47 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಕಿಚ್ಚ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಮನೆ ಬಳಿ ಗುಂಪು ಸೇರುವುದು ಬೇಡ ಅಂತ ಅವರು ಟ್ವೀಟ್ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಸಣ್ಣದೊಂದು ಪತ್ರವನ್ನು ಟ್ವೀಟ್​​ಗೆ ಲಗತ್ತಿಸಿದ್ದಾರೆ. ಕಿಚ್ಚನ ಆ ಪತ್ರದ ಪೂರ್ಣಪಾಠ ಇಲ್ಲಿದೆ…

 

“ಸ್ನೇಹಿತರಾದ ನಿಮಗೆಲ್ಲಾ ಒಂದು ಸಣ್ಣ ಮನವಿ

ಬಹಳ ವರ್ಷಗಳಿಂದ ನಿಮ್ಮನ್ನೆಲ್ಲಾ ಭೇಟಿಯಾಗುವುದು ಒಂದು ಸಂಸ್ಕೃತಿಯಂತಾಗಿದೆ ಹಾಗೂ ಬೇರೆ ಯಾವುದೇ ಸಂತೋಷ ಅದನ್ನು ಬದಲಾಯಿಸಲು ಆಗದು. ಶುಭಾಶಯ ಕೋರಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ನಿಮ್ಮೊಂದಿಗೆ ಒಂದು ದಿನ ಪೂರ್ತಿ ಸಮಯ ಕಳೆಯುವ ಅವಕಾಶ ನನಗೆ ಸಿಗುತ್ತಿತ್ತು.

ಸದ್ಯದ ಪರಿಸ್ಥಿತಿ ಅನುಮತಿಸುತ್ತಿಲ್ಲ ಅಥವಾ ಬೆಂಬಲಿಸುತ್ತಿಲ್ಲ. ನಿಮ್ಮೆಲ್ಲರನ್ನೂ ಭೇಟಿಯಾಗಲು ಯಾವುದೇ ಆಚರಣೆ ಅಥವಾ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಹೇಳಲು ವಿಷಾಧಿಸುತ್ತೇನೆ. ನಾನು ನಿಮ್ಮೆಲ್ಲರ ಹಾಗೂ ನನ್ನ ವಯಸ್ಸಾಗುತ್ತಿರುವ ಹೆತ್ತವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ. ಬೃಹತ್ ಒಟ್ಟುಗೂಡುವಿಕೆ ಅಂದರೆ, 10 ಹೆಜ್ಜೆ ಹಿಂದಿಟ್ಟು ತೊಲಗಿಸಲು ಪ್ರಯತ್ನಿಸುತ್ತಿದ್ದೇವೋ ಅದನ್ನು ಮತ್ತೆ ಆಮಂತ್ರಿಸಿದಂತೆ. ಕೊವಿಡ್ ಇನ್ನೂ ದೊಡ್ಡ ಬೆದರಿಕೆಯಾಗಿಯೇ ಇದೆ ಮತ್ತು ನಾವೆಲ್ಲರೂ ಕುಟುಂಬಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಜನ ನನ್ನ ಜನ ಕೂಡ ಹೌದು . ಜನರು ಪೀಡಿತರಾಗುವ ಹಾಗೂ ನರಳುವ ಸುದ್ದಿ ಕೇಳಿದರೆ ಸಮವಾಗಿ ನನಗೂ ನೋವುಂಟು ಮಾಡುತ್ತದೆ.

ನಿಮ್ಮ ಶುಭಾಶಯಗಳು ನನಗೆ ಮುಖ್ಯವಾದುದ್ದೇ ಹಾಗೂ ನಾನು ಹೇಳಿದಂತೆ ಬೃಹತ್ ಸಂಖ್ಯೆಯಲ್ಲಿ ಬರುವ ನಿಮ್ಮನ್ನು ಕಾಣುವ ಸಂತೋಷವನ್ನು ಬೇರೆ ಯಾವುದೂ ಅದನ್ನು ಬದಲಾಯಿಸಲು ಆಗದು. ನಾನು ಖಚಿತವಾಗಿ ಹೇಳುತ್ತೇನೆ, ಬಹಳ ಬೇಗ ಆ ದಿನವೂ ಬರುತ್ತದೆ ಹಾಗೂ ನಾವು ಮತ್ತೆ ಭೇಟಿಯಾಗುತ್ತೇವೆ. ಆದರೆ, ಸದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲೂ ಒಟ್ಟುಗೂಡಬೇಡಿ. ಯಾವುದೇ ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಗಳು ಇರುವುದಿಲ್ಲ.

ಹೌದು, ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶದ ಕೆಲವರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ. ಅದು ನಿಮಗೆ ಒಳ್ಳೆಯದನ್ನು ಮಾತ್ರ ಮಾಡುತ್ತದೆ.

ಈ ಅನೇಕ ವರ್ಷಗಳು ನನ್ನ ಪರವಾಗಿ ನಿಂತಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ಒಂದೊಂದು ಸಲ ನಿಮ್ಮ ನಿರೀಕ್ಷೆಗಳಿಗೆ ನಾನು ಇರಲಿಲ್ಲ. ನಾನು ಖಂಡಿತವಾಗಿಯೂ ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಅದಕ್ಕೆ ತಕ್ಕಂತೆ ಇರಲು.., ನಿಮ್ಮನ್ನೆಲ್ಲಾ ಹೆಚ್ಚು ಮನೋರಂಜಿಸಲು, ಮತ್ತೆ ಕೊವಿಡ್​​ನೊಂದಿಗಿನ ಈ ಇಡೀ ಯುದ್ಧವು ಮುಗಿದ ನಂತರ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು…

ನಿಮ್ಮೆಲ್ಲರಿಗೂ ತುಂಬು ಪ್ರೀತಿ, ಇಂದಿಗೂ ಎಂದಿಗೂ ನಿಮ್ಮ ಪ್ರೀತಿಯ ಕಿಚ್ಚ…

ಇನ್ನು ಸದ್ಯ ಸುದೀಪ್ ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು,ಸಂಜೆ ಹೈದರಾಬಾದ್​ಗೆ ತೆರಳುತ್ತಿದ್ದಾರೆ. ನಾಳೆಯಿಂದ ಮತ್ತೆ ಶೂಟಿಂಗ್​​​ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

‘ಪೈಲ್ವಾನ್​’@46 – ಕಿಚ್ಚನ ಸಿನಿಮಾಗಳ ಮೂಲಕವೇ ಪವರ್​ ಟಿವಿಯಿಂದ ವಿಶ್​..!

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments