ಹುಟ್ಟುಹಬ್ಬದಂದು ದರ್ಶನ್ ಬಗ್ಗೆ ಕೇಳಿದ್ದಕ್ಕೆ ಸುದೀಪ್ ಕೂಲ್ ರಿಯಾಕ್ಷನ್..!

0
2408

ಬೆಂಗಳೂರು : ಚಾಲೆಂಜಿಂಗ್​ ಸ್ಟಾರ್ ದರ್ಶನ್ ಬಗ್ಗೆ ಕೇಳಿದ್ದಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಲ್ ಕೂಲಾಗಿ ಉತ್ತರಿಸಿದ್ದಾರೆ.
ಎಲ್ರಿಗೂ ಗೊತ್ತೇ ಇದೆ ಇಂದು ಕಿಚ್ಚ ಸುದೀಪ್ ಅವ್ರ 46ನೇ ಹುಟ್ಟುಹಬ್ಬ. ಅಭಿಮಾನಿಗಳ ಜೊತೆ ಸುದೀಪ್ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಸುದ್ದಿಗಾರರ ಜೊತೆ ಸುದೀಪ್ ಮಾತನಾಡುವಾಗ ದರ್ಶನ್ ಬಗ್ಗೆ ಪ್ರಶ್ನೆ ಎದುರಾಯ್ತು. ಆಗ ಸುದೀಪ್ ಒಂಥರಾ ಸೈಲೆಂಟಾಗಿಯೇ, ಚಿಕ್ಕದಾಗಿ, ಚೊಕ್ಕವಾಗಿ ರಿಯಾಕ್ಷನ್ ಕೊಟ್ರು.
‘ಒಳ್ಳೆಯ ವಿಷಯಗಳ ಬಗ್ಗೆ ಮಾತಾಡಣ. ಮೂರು ಕೋತಿಗಳ ಕಥೆ ಇದೆಯಲ್ಲಾ (ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿರುವ ಕೋತಿಗಳು) ಆ ಕಥೆಯನ್ನು ಸುಮ್ನೆ ಹೇಳಿಲ್ಲ” ಎಂದಷ್ಟೇ ಹೇಳಿದರು. ತಲೇಲಿ ಹುಳ ಬಿಡ್ಕೊಂಡು ನಮ್ಗೇ ಹೇಳಿದ್ರು ಅನ್ಕೋಳೋದು ಬೇಡ. ಕೆಲಸ ಮಾಡೋಣ.. ಅದ್ರಲ್ಲಿ ನಮ್ ಬೆಳವಣಿಗೆ ಇರೋದು” ಎಂದರು. ಅಷ್ಟೇ ಅಲ್ಲದೆ ಕಲಾವಿದರಿಗೆ ಪದಗಳಿಗಿಂತ ಸಿನಿಮಾಗಳು ಮಾತನಾಡ್ಬೇಕು ಅನ್ನೋ ಮಾತನ್ನು ಕೂಡ ಕಿಚ್ಚ ಈ ವೇಳೆ ಹೇಳಿದ್ರು.

LEAVE A REPLY

Please enter your comment!
Please enter your name here