ಚಿತ್ರದುರ್ಗ: ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಬರ್ತ್ ಡೇ ಸಂಭ್ರಮ ಹಿನ್ನೆಲೆಯಲ್ಲಿ ಕೋಟೆನಾಡುದ ಬೆಳಗಟ್ಟ ಗ್ರಾಮದಲ್ಲಿ, ಸುದೀಪ್ ಅಭಿಮಾನಿಗಳು ಸಡಗರ ಸಂಭ್ರಮದಿಂದ ಕಿಚ್ಚನ ಹುಟ್ಟು ಹಬ್ಬ ಆಚರಿಸಿದ್ದಾರೆ. ಗ್ರಾಮದ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯನ ಸನ್ನಿಧಾನದಲ್ಲಿ ಅಭಿಮಾನಿಗಳ ವತಿಯಿಂದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪೈಲ್ವಾನ್ಗೆ ಶುಭ ಹಾರೈಸಿದ್ರು. ಅಲ್ದೆ ಹತ್ತಾರು ಸುದೀಪ್ ಅಭಿಮಾನಿಗಳು ಮಾಸ್ಕ್ ಧರಿಸಿ, ಕೇಕ್ ಕಟ್ ಮಾಡುವ ಮೂಲಕ ಕಿಚ್ಚನಿಗೆ ಶುಭಾಶಯ ಸಲ್ಲಿಸಿದ್ದಾರೆ.