Monday, January 17, 2022
Powertv Logo
Homeದೇಶದಳ್ಳುರಿಗೆ ತುಪ್ಪ ಸುರಿತಿದ್ದಾರೆ ನಾಯಕರು!

ದಳ್ಳುರಿಗೆ ತುಪ್ಪ ಸುರಿತಿದ್ದಾರೆ ನಾಯಕರು!

ಆಫ್ರಿಕಾ : ಸದಾ ಒಂದಲ್ಲ ಒಂದು ಕಲಹಗಳ ಮೂಲಕ ಸದಾ ಸುದ್ಧಿಯಲ್ಲಿರುವ ನಾರ್ತ್​ ಆಫ್ರಿಕಾದ ಸುಡಾನ್​ ರಾಷ್ಟ್ರ ಈಗ ಸಂಘರ್ಷದ ಭೂಮಿಯಾಗಿದೆ.. ಈ ಬಗ್ಗೆ ಧ್ವನಿ ಎತ್ತಬೇಕಾದ ಹ್ಯೂಮನ್​ ರೈಟ್ಸ್ ಸಂಘಟನೆಗಳು ಬಾಯ್ಮುಚ್ಚಿಕೊಂಡು ಕುಳಿತಿದ್ದು, ಈ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.. ಅಷ್ಟಕ್ಕೂ ಈ ಸೂಡಾನ್​ ಅನ್ನೋ ಸಂಘರ್ಷ ಪೀಡಿತ ರಾಷ್ಟ್ರದಲ್ಲಿ ನಡೀತಾ ಇರೋದಾದ್ರೂ ಏನು ಅಂತೀರಾ ?

ಸೂಡಾನ್​ ದೇಶ ತನ್ನ ಐತಿಹಾಸಿಕ ಹಿನ್ನೆಲೆಯಿಂದ ಜಗತ್ತಿನಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನ ಹೊಂದಿದೆ. ಒಂದು ಕಾಲದಲ್ಲಿ ತನ್ನ ರಾಷ್ಟ್ರದ ಇತಿಹಾಸ ಕಾಲದ ಗತವೈಭವವನ್ನ ಜಗತ್ತಿಗೆ ಹೇಳುತ್ತಾ, ಶಾಂತಿಯುತವಾಗಿ ಜೀವನವನ್ನ ನಡೆಸ್ತಾ ಇದ್ದ ಜನರು ಈಗ ಇತಿಹಾಸ ಕಂಡು ಕೇಳರಿಯದ ಮಟ್ಟಿಗೆ ಭೀಕರ ಬಡತನ ಹಾಗು ಗಲಭೆಗಳಂತಹ ತೊಂದರೆಗಳಿಂದ ನಲುಗಿ ಹೋಗ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೂಡನ್​ನಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗ್ತಾ ಇದೆ. ಮೊನ್ನೆ ಮೊನ್ನೆ ನಡೆದ ಪ್ರತಿಭಟನೆಯಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಬಿದ್ದಿದೆ.

ಅಷ್ಟಕ್ಕೂ ಸೂಡಾನ್​ನಲ್ಲಿ ಯಾಕೆ ಹೀಗೆ ಧಂಗೆಗಳು ಆಗ್ತಿದ್ದಾವೆ. ಅಲ್ಲಿನ ನಾಗರಿಕರ ನಡುವೆಯೇ ಸಂಘರ್ಷ ನಡೀತಾ ಇರೋದು ಯಾಕೆ ಅನ್ನೋದು ಎಲ್ಲರನ್ನ ಕಾಡ್ತಾ ಇರೋ ಪ್ರಶ್ನೆ. ಈ ಬಗ್ಗೆ ರಾಜಕೀಯದ ವಿಶ್ಲೇಷಕರು ಹೇಳ್ತಾ ಇರೋ ಪ್ರಕಾರ, ಸೂಡಾನ್​ನಲ್ಲಿ ನಡಿತಾ ಇರೋ ಬಹುತೇಕ ಸಂಘರ್ಷಗಳು ರಾಜಕೀಯ ಪ್ರೇರಿತವಾಗಿದೆ​ ಅನ್ನೋದು ಅವರ ವಾದ. ಅಷ್ಟಕ್ಕೂ ಈ ನಾಗರೀಕ ಧಂಗೆಗಳು ನಡೀತಾ ಇರೋದು ಇಂದು ನಿನ್ನೆಯಿಂದಲ್ಲ, ಬದಲಿಗೆ 2003ರಿಂದ.. ಹೌದು, ಸೂಡಾನ್​ನ ಮಾಜಿ ಅಧ್ಯಕ್ಷ ಓಮರ್​ ಅಲ್​ ಬಷೀರ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಾಗಿನಿಂದ ಒಂದಲ್ಲ ಒಂದು ರೀತಿಯಾದ ಮಾನವ ಸಂಘರ್ಷಗಳು ನಡೆಯುತ್ತಲೇ ಇವೆ.

ಇದಕ್ಕೆ ಹಲವು ಕಾರಣಗಳನ್ನ ಉಲ್ಲೇಖಿಸಿರುವ ರಾಜಕೀಯ ತಜ್ಞರು, ಈ ಬಶೀರ್​ ನಂತರದಲ್ಲಿ ಕೆಲ ಕಾನೂನಾತ್ಮಕ ಬದಲಾವಣೆ ತರೋದ್ರಲ್ಲಿ ಅಲ್ಲಿನ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಇವುಗಳಲ್ಲಿ ಪ್ರಮುಖವಾಗಿ ರೈತರ ಭೂ ವಿವಾದಗಳು ಹಾಗು ಕೆಲ ಅಂತಾರಾಷ್ಟ್ರೀಯ ವ್ಯವಹಾರಗಳ ಪರ ವಿರೋಧವಿರುವವರ ನಡುವೆ ಈ ಘರ್ಷಣೆ ನಡೀತಾ ಇದೆ. ಇನ್ನು ಇಂತವರಿಗೆ ಹಲವು ರಾಜಕೀಯ ಸಂಘಟನೆಗಳು ಫಂಡ್​ ಮಾಡ್ತಿವೆ ಅನ್ನೋ ಮಾತುಗಳು ಕೂಡ ಕೇಳಿಬಂದಿವೆ.

ಮೊನ್ನೆ ಸೂಡಾನ್​​ನಲ್ಲಿ ನಡೆದ ರೈತರ ಗಲಭೆಯಲ್ಲಿ ಹೊಸ ಸರ್ಕಾರದ ಕೈವಾಡವಿದೆ ಅಂತ ರಾಜಕೀಯ ತಜ್ಞರು ಹೇಳ್ತಿದ್ದಾರೆ. ಹೌದು, ಸೂಡಾನ್​ನ ಪಶ್ಚಿಮ ದರ್ಪುರ್ ಪ್ರದೇಶದಲ್ಲಿ ಅರಬ್​​ನ ದನಗಾಹಿಗಳು ಹಾಗು ಮಿಸ್ಸೆರಿಯಾ ಜೆಬೆಲ್ ರೈತರ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ ಅಂದ್ರೆ 50 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 1,000ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಅನ್ನೋ ಅಂಶವನ್ನ ವಿಶ್ವಸಂಸ್ಥೆ ಬಹಿರಂಗಪಡಿಸಿದೆ. ನವೆಂಬರ್ 17ರಂದು ಚಾಡ್​ನ ಗಡಿಗೆ ಸಮೀಪವಿರುವ ಒರಟಾದ ಜೆಬೆಲ್ ಮೂನ್ ಪರ್ವತಗಳಲ್ಲಿ ಶಸ್ತ್ರಸಜ್ಜಿತ ಅರಬ್ ದನಗಾಹಿಗಳ ನಡುವೆ ಹಿಂಸಾಚಾರ ನಡೆದಿತ್ತು.

ಈ ಬಗ್ಗೆ ವೆಸ್ಟ್ ದರ್ಫುರ್ ರಾಜ್ಯದ ಸೂಡಾನ್​​ ಮಾನವೀಯ ನೆರವು ಕಮಿಷನರ್ ಓಮರ್ ಅಬ್ದುಲ್ ಕರಿಮ್ ಹೇಳಿಕೆ ನೀಡಿದ್ದಾರೆ. ಇನ್ನು ಈ ಗಲಭೆಗೆ ಪ್ರಮುಖ ಕಾರಣ ಭೂ ವಿವಾದಗಳು ಅಂತ ಹೇಳಲಾಗ್ತಾ ಇದ್ದು, ಅಲ್ಲಿನ ಸರ್ಕಾರ ಜಮೀನು ಖರೀದಿಗೆ ಮುಂದಾಗಿತ್ತು. ಇದಕ್ಕೆ ಕೆಲ ಗ್ರಾಮದವರು ವಿರೋಧಿಸಿದ್ರೆ ಮತ್ತೆ ಕೆಲವರು ಬೆಂಬಲಿಸಿದ್ದಾರೆ. ಇನ್ನು ಸರ್ಕಾರದ ವಿರೋಧಿ ಗುಂಪು ಹಲವು ದುಷ್ಕೃತ್ಯಗಳಿಗೆ ಮುಂದಾಗಿದ್ದು, ಈ ಹಿಂದಿನಿಂದಲೂ ಮಕ್ಕಳು ಮಹಿಳೆಯರನ್ನ ಕಿಡ್ನ್ಯಾಪ್​ ಮಾಡ್ತಿದೆ.

ಹಿಂದಿನಿಂದಲೂ ಕೂಡ ಸೂಡಾನ್​ನ ಕೆಲ ಗುಂಪುಗಳು ಉಗ್ರವಾದಕ್ಕೆ ಇಳಿದಿದ್ದು, ಸೂಡಾನ್​​ನಲ್ಲಿ ಹಲವು ಗಲಭೆಗಳಿಗೆ ಕೂಡ ಕಾರಣವಾಗಿದೆ. ಇದರಲ್ಲಿ ಸಾಕಷ್ಟು ಬಾರಿ ಸೂಡಾನ್​​ನ ಹಲವು ಪ್ರತಿಷ್ಠಿತ ರಾಜಕೀಯ ನಾಯಕರನ್ನ ಬೆಂಬಲಿಸುವ ಸಂಘಟನೆಗಳು, ಮತೀಯ ಭಿನ್ನಾಭಿಪ್ರಾಯವಿರುವ ಸಂಘಟನೆಗಳು ಜನರ ಸಂಘರ್ಷದಲ್ಲಿ ಭಾಗಿಯಾಗ್ತಾ ಇದ್ದು ಇದು ಜನಾಂಗೀಯ ಗಲಭೆಗೆ ಕಾರಣ ಅಂತ ಹೇಳಲಾಗ್ತಿದೆ. ಈ ಗಲಭೆಯ ಬಗ್ಗೆ ಸೂಡಾನ್​ ಸರ್ಕಾರದ ಅಧಿಕಾರಿಯೊಬ್ರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಅವರ ಪ್ರಕಾರ ಈ ಗಲಭೆಗೂ ಸೂಡಾನ್​ ಸರ್ಕಾರಕ್ಕೂ ಸಂಬಂಧವಿಲ್ಲ. ಬದಲಿಗೆ ಇದು ಜನಾಂಗಿಯ ಗಲಭೆ ಅನ್ನೋ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಇದು ಜನಾಂಗೀಯ ಗಲಭೆಯಾಗಿದ್ರೆ ವಿಶ್ವಸಂಸ್ಥೆ ಈ ಗಲಭೆಯ ಬಗ್ಗೆ ಬಹಿರಂಗಪಡಿಸೋವರೆಗೆ ಸೂಡಾನ್​ ಸುಮ್ಮನಿದ್ದಿದ್ದು ಯಾಕೆ ಅನ್ನೋ ಪ್ರಶ್ನೆ ಹಲವರನ್ನ ಕಾಡ್ತಾ ಇದೆ. 2003ರಿಂದಲೂ ಸೂಡಾನ್​ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಜೆಬೆಲ್ ಮೂನ್ ಪ್ರದೇಶದಲ್ಲಿ ಸುಮಾರು 66,500 ಮಂದಿ ವಾಸಿಸುತ್ತಿದ್ದಾರೆ. ಇದರಲ್ಲಿ ಸುಮಾರು 43,000ಕ್ಕೂ ಅಧಿಕ ಜನರಿಗೆ ನೆರವಿನ ಅಗತ್ಯವಿದೆ ಅಂತ ವರದಿ ಹೇಳ್ತಾ ಇದೆ.

ಒಟ್ಟಾರೆಯಾಗಿ ಸೂಡಾನ್​ ದೇಶ ದಿನದಿಂದ ದಿನಕ್ಕೆ ಒಂದಲ್ಲ ಒಂದು ಗಲಭೆಯಿಂದ ಸುಡ್ತಾ ಇದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಗಮನಹರಿಸದೇ ಇದ್ದರೆ ಸೂಡಾನ್​ ಅನ್ನೋ ರಾಷ್ಟ್ರ ಬಹುಬೇಗನೆ ಸುಡುಗಾಡು ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

Recent Comments