Home ರಾಜ್ಯ ಸಾಕು ತಂದೆಯ ಸಾವಿನಿಂದ ಮನನೊಂದ ಯುವತಿ; ಡೆತ್ ನೋಟ್ ಬರೆದಿಟ್ಟು ಸುಸೈಡ್!

ಸಾಕು ತಂದೆಯ ಸಾವಿನಿಂದ ಮನನೊಂದ ಯುವತಿ; ಡೆತ್ ನೋಟ್ ಬರೆದಿಟ್ಟು ಸುಸೈಡ್!

ಗದಗ: ಸಾಕಿ ಸಲುಹಿದ ತಂದೆಯ ಸಾವಿನಿಂದ ನೊಂದಿದ್ದ ಯುವತಿ ನೇಣಿಗೆ ಶರಣಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿನ ಪತಂಜಲಿ‌ ಮಾರಾಟ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು, ಮೃತಳನ್ನು ದೀಪಾ ಕಾಗನೂರಮಠ ಎಂದು ಗುರುತಿಸಲಾಗಿದೆ. ಕಳೆದ ೧೦ ವರ್ಷಗಳ ಹಿಂದೆ ಹೆತ್ತ ತಂದೆ ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಸಾಕು ತಂದೆಯೂ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ದೀಪಾ ತುಂಬಾ ನೊಂದಿದ್ದಳು. ಹೀಗಾಗಿ ತಾನು ಕೆಲಸ ಮಾಡುತಿದ್ದ ಪತಂಜಲಿ ಮಾರಾಟ ಮಳಿಗೆಯಲ್ಲಿ ಇಂದು ನೇಣಿಗೆ ಶರಣಾಗಿದ್ದಾಳೆ.  ಡೆತ್ ನೋಟ್ ನಲ್ಲಿ ಯುವತಿ ಈ ವಿಚಾರ ಬರೆದಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಮುಂಡರಗಿ ಠಾಣೆಯ ಇನ್ಸ್ಪೆಕ್ಟರ್ ಸುದೀರ್ ಬೆಂಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ಹಾನಿಗೆ ಪರಿಹಾರ ನೀಡಿ: ಜೆಡಿಎಸ್ ರಾಜ್ಯಾಧ್ಯಕ್ಷ

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಜೀವ ಹಾನಿ ಹಾಗೂ ಬೆಳೆ ನಾಶವಾಗುತ್ತಿರುವ ಹಿನ್ನಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಲೂರು ಹಾಗೂ ಸಕಲೇಶಪುರ ಕ್ಷೇತ್ರದ...

ನಕಲಿ ತಹಸೀಲ್ದಾರ್ ಮತ್ತು ಬ್ರೋಕರ್ ಎಸಿಬಿ ಬಲೆಗೆ..!

ತುಮಕೂರು : ತಹಶೀಲ್ದಾರ್ ಮೋಹನ್ ಅವರ ಹೆಸರಿನಲ್ಲಿ ರೈತರೊಬ್ಬರಿಂದ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದ ಇಬ್ಬರು ಬ್ರೋಕರ್ ಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ರುದ್ರಸ್ವಾಮಿ ಮತ್ತು ಹರಳೂರು ಗ್ರಾಮದ ಶಿವಕುಮಾರ್...

ಕನ್ನಡದ ಹಾಸ್ಯ ಕಲಾವಿದ ರಾಜ ಗೋಪಾಲ್ ಇನ್ನಿಲ್ಲ..!

ಬೆಂಗಳೂರು : ಕನ್ನಡದ ಹಾಸ್ಯ ಕಲಾವಿದರಾಗಿದ್ದ ರಾಜ ಗೋಪಾಲ್ ನಿನ್ನೆ ರಾತ್ರಿ 1 ಗಂಟೆಗೆ ಮನೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅಸ್ತಮ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ 69 ವರ್ಷ ವಯಸ್ಸಾಗಿತ್ತು. ರಾಜ್ ಗೊಪಾಲ್ ಕೆಂಗೇರಿ...

ರಾಬರಿ ಆರೋಪಿಯಿಂದ ‘ಖಾಕಿ’ಗೆ ಕಂಟಕ..!

ದೇವನಹಳ್ಳಿ : ರಾಜ್ಯದಲ್ಲಿ ಕೊರೊನಾ ವೈರಸ್ ಪೋಲಿಸ್ ಸಿಬ್ಬಂದಿಗಳಿಗೆ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಬೇರೆ ಬೇರೆ ಮಾರ್ಗಗಳಿಂದ ಕೊರೊನಾ ವೈರಸ್ ಹರಡುತ್ತಿದೆ....