ಚಾಮರಾಜನಗರ : ಇಂದು ರಾಜ್ಯದಲ್ಲಿ ಸುಬ್ರಮಣ್ಯ ಷಷ್ಠಿ ಹಬ್ಬ ಇರುವುದರಿಂದ ಭಕ್ತರು ನಾನಾ ರೀತಿಯಲ್ಲಿ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಚಾಮರಾಜನಗರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ವಿಶೇಷ ರೀತಿಯಲ್ಲಿ ಷಷ್ಠಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.
ಇಲ್ಲಿನ ಬಹುಪಾಲು ಮಂದಿ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಭಯ ಭಕ್ತಿಯಿಂದ ಈ ಹಬ್ಬ ಆಚರಿಸಲಿರುವ ಈ ಭಕ್ತರು ಪೂಜೆಯಾಗುವರರೆಗೂ ಒಂದು ಹನಿ ನೀರನ್ನು ಸಹ ಕುಡಿಯುವುದಿಲ್ಲ.
ಸಾಮಾನ್ಯವಾಗಿ ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತವನ್ನು ಹುತ್ತಕ್ಕೆ ಎರೆಯುವುದು ಸಹಜ. ಆದರೆ ಇಲ್ಲಿನ ಬಹುತೇಕ ಗ್ರಾಮಗಳಲ್ಲಿ ಹಾಲಿನ ಬದಲಿಗೆ ಕೋಳಿ ರಕ್ತ, ಮೊಟ್ಟೆಯೇ ನಾಗಪ್ಪನಿಗೆ ನೈವೇದ್ಯ ರೂಪದಲ್ಲಿ ನೀಡಲಾಗಿದೆ.
ಹೌದು, ಚಾಮರಾಜನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಸೇರಿ ಹಲವು ಕಡೆ ತಲತಲಾಂತರದಿಂದ ನಡೆದು ಬಂದಿರುವ ಪದ್ದತಿಯನ್ನು ಇಂದಿಗೂ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗಿದೆ. ಈ ರೀತಿ ಕೋಳಿ ಬಲಿಕೊಟ್ಟರೇ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ ಎಂಬ ಅಪಾರ ನಂಬಿಕೆಯಿಂದ ಕೋಳಿ ಬಲಿ ಕೊಟ್ಟು ಕೋಳಿ ತಲೆ, ಮೊಟ್ಟೆಯನ್ನು ಹುತ್ತದ ಕೋವಿಗೆ ಹಾಕುವ ಪದ್ದತಿ ಇದೆ. ಅಲ್ಲದೇ ಬಹುತೇಕ ಕಡೆ ಇಂದು ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ಭಕ್ತರು ನಮಿಸುತ್ತಿದ್ದಾರೆ.
zithromax 250mg
buy zithromax 250mg online