Home ರಾಜ್ಯ ಪ್ರವಾಹಕ್ಕೆ ಪುಸ್ತಕಗಳೆಲ್ಲಾ ನೀರುಪಾಲು ; ಅಳಲು ತೋಡಿಕೊಂಡ ವಿದ್ಯಾರ್ಥಿನಿ

ಪ್ರವಾಹಕ್ಕೆ ಪುಸ್ತಕಗಳೆಲ್ಲಾ ನೀರುಪಾಲು ; ಅಳಲು ತೋಡಿಕೊಂಡ ವಿದ್ಯಾರ್ಥಿನಿ

ಗದಗ: ಒಂದೆಡೆ ಕೊರೋನಾ‌ ಮತ್ತೊಂದು ಕಡೆ‌ ಮಲಪ್ರಭಾ ಪ್ರವಾಹ. ಇವೆರೆಡಕ್ಕೂ ಸಿಕ್ಕು ವಿದ್ಯಾರ್ಥಿಗಳ ಬಾಳು ಕಣ್ಣೀರಿನ ಗೋಳಿನ‌ ದೃಶ್ಯ ಹೇಳತೀರದಾಗಿದೆ. ಈ ದೃಶ್ಯ ಕಂಡುಬಂದಿದ್ದು ಗದಗ ಜಿಲ್ಲೆ‌ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ.

ಮಲಪ್ರಭಾ ಪ್ರವಾಹದ ಬಿಸಿ ಶಾಲಾ‌ಮಕ್ಕಳಿಗೂ ತಟ್ಟಿದೆ. ಕೊಣ್ಣೂರ ಗ್ರಾಮದ ಸ್ಫೂರ್ತಿ ಮಾನಮ್ಮನರ್ ಎಂಬ 5 ನೇ ತರಗತಿ ವಿದ್ಯಾರ್ಥಿನಿ ಮೊರಾರ್ಜಿ ಪರೀಕ್ಷೆಯ ನಿರೀಕ್ಷೆಯಲ್ಲಿದ್ದಳು. ಪ್ರವಾಹಕ್ಕೆ ಹೆದರಿ ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದರು. ಪ್ರವಾಹ ತಗ್ಗಿದ ಮೇಲೆ ಮನೆಗೆ ಬಂದ ವಿದ್ಯಾರ್ಥಿನಿ ತನ್ನ ಪಠ್ಯ ಪುಸ್ತಕಗಳು ಹಾಗೂ ನೋಟ್ ಬುಕ್ ಗಳು ನೀರಿನಲ್ಲಿ ಹಾಳಾಗಿರುವುದನ್ನು ಕಂಡು ದಾರಿಕಾಣದಾಗಿದ್ದಾಳೆ. ನೀರಲ್ಲಿ ನೆನೆದು ಹಾಳಾದ ಪುಸ್ತಕಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿನಿ ಹರಸಾಹ ಪಡ್ತಿದ್ದಾಳೆ. ಪ್ರವಾಹದ ರುದ್ರನರ್ತನಕ್ಕೆ ಅನೇಕ ವಿದ್ಯಾರ್ಥಿಗಳ ಪಠ್ಯ-ಪುಸ್ತಕಗಳು ನೀರಲ್ಲಿ ತೇಲಿಹೋಗಿವೆ. ಅಳಿದುಳಿದ ಪಠ್ಯ ಪುಸ್ತಕಗಳನ್ನು ಕಂಡು ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಕೊರೋನಾ ಹಾಗೂ ಪ್ರವಾಹಕ್ಕೆ ಸಿಲುಕಿ ವಿದ್ಯಾರ್ಥಿಗಳ ಬಾಳು ಕಣ್ಣೀರಿನ ಗೋಳಾಗಿದೆ. ಸಾಕಷ್ಟು ತೊಂದರೆ ಆಗ್ತಿದೆ. ಶಾಲೆಯೂ ಇಲ್ಲ, ಇತ್ತ ಬುಕ್ಸ್ ಗಳು ಇಲ್ಲ. ಓದೋದಾದ್ರೂ ಹೇಗೆ? ಮುಂದೆ ಪರೀಕ್ಷೆ ಬರೆಯೋದಾದ್ರೂ ಹೇಗೆ? ಸಾಕಷ್ಟು ಸಮಸ್ಯೆ ಆಗ್ತಿದೆ ಅಂತ ವಿದ್ಯಾರ್ಥಿನಿ ತನ್ನ ಅಳಲು ತೋಡಿಕೊಳ್ತಿದ್ದಾಳೆ.

-ಮಹಾಲಿಂಗೇಶ್ ಹಿರೇಮಠ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments