Home P.Special ಬಾಂಬೆಯ "ಆ ದಿನಗಳು" ಹೆಂಗಿದ್ವು ಗೊತ್ತಾ...? | ಸಚಿವ ಎಸ್.ಟಿ.ಸೋಮಶೇಖರ್

ಬಾಂಬೆಯ “ಆ ದಿನಗಳು” ಹೆಂಗಿದ್ವು ಗೊತ್ತಾ…? | ಸಚಿವ ಎಸ್.ಟಿ.ಸೋಮಶೇಖರ್

ಮಂಡ್ಯ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಆ 23 ಶಾಸಕರೇ ಕಾರಣ.

ಜೆಡಿಎಸ್, ಕಾಂಗ್ರೆಸ್ ಪಕ್ಷಗಳನ್ನ ತ್ಯಜಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಾಂಬೆ ಸೇರಿದ್ದ ಶಾಸಕರ “ಆ ದಿನಗಳು” ಹೇಗಿದ್ವು. ಅಲ್ಲಿ ಏನು ಸರಿ ಇತ್ತು. ಏನು ಸರಿ ಇರಲಿಲ್ಲ. ಆ ವೇಳೆ ನೆರವಾದವರು ಯಾರು ಅನ್ನೋ ಗುಟ್ಟು ರಟ್ಟಾಗಿದೆ.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, “ಬಾಂಬೆಯ ಆ ದಿನಗಳನ್ನ” ನೆನಪು ಮಾಡಿಕೊಂಡಿದ್ದಾರೆ. ಹಾಗಾದರೆ, ಏನದು ಸೋಮಶೇಖರ್ ಸ್ಮರಿಸಿದ ವಿಚಾರ ಅಂತೀರಾ ಈ ಸುದ್ದಿ ಓದಿ. ಹೌದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಸಿಡಿದು, ತಮ್ಮ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ 23 ಶಾಸಕರು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣೀಭೂತರು.
ಈ 23 ಶಾಸಕರು ಪಕ್ಷ ತ್ಯಜಿಸಿ ಮತ್ತು ಶಾಸಕ ಸ್ಥಾನ ಕಳೆದುಕೊಂಡು ಕೆಲವು ದಿನಗಳ ಕಾಲ ಬಾಂಬೆಯಲ್ಲಿ ವಾಸವಿದ್ರು. ಈ ಬಾಂಬೆ ಲೈಫ್ ಸ್ಟೈಲ್ ಬಗ್ಗೆ ಈಗಾಗಲೇ ಮಾಜಿ ಸಚಿವ ಹೆಚ್. ವಿಶ್ವನಾಥ್ ಪುಸ್ತಕ ಬರೆಯುವುದಾಗಿ ಘೋಷಣೆ ಮಾಡಿದ್ದಾರೆ. ಈ ನಡುವೆಯೇ “ಆ ಬಾಂಬೆ ದಿನಗಳ”ನ್ನ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ನೆನಪು ಮಾಡಿಕೊಂಡ್ರು. ಆ ಮೂಲಕ ಸಹೋದ್ಯೋಗ ಸಚಿವ ಕೆ.ಸಿ.ನಾರಾಯಣಗೌಡರನ್ನ ಹಾಡಿ, ಹೊಗಳಿದ್ದಾರೆ. ಮಂಗಳವಾರ ಸಂಜೆ ಮಂಡ್ಯದ ರೈತ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಚೆಕ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆ ಉದ್ಘಾಟನೆ ಮಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಚೆಕ್ ವಿತರಣೆ ಮಾಡಿ, ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ‘ಆ ಬಾಂಬೆ ದಿನಗಳು’ ಹಾಗೂ ‘ನಾರಾಯಣಗೌಡರ ಬಾಡೂಟ, ಮುದ್ದೆ, ನಾಟಿ ಕೋಳಿ ಸಾರು’ ನೆನಪಿಸಿಕೊಂಡ್ರು.

ಸೋಮಶೇಖರ್ ಹೇಳಿದ್ದಾದರೂ ಏನು?:

ಬೇರೆ ಬೇರೆ ಕಾರಣಗಳಿಂದ ನಾವೆಲ್ಲಾ ಬಾಂಬೆಯಲ್ಲಿದ್ದೆವು. ಆದರೆ ಊಟದ ವ್ಯವಸ್ಥೆ ಸರಿ ಇರಲಿಲ್ಲ. ನಮಗೆಲ್ಲ ಬಾಡೂಟ ಹಾಕಿದ್ದು ನಾರಾಯಣಗೌಡ. ಅವತ್ತು 23 ಶಾಸಕರುಗಳಿಗೆ ಮುದ್ದೆ, ನಾಟಿಕೋಳಿ ಸಾರು ಎಲ್ಲವನ್ನ ತಂದು ಕೊಟ್ಟರು. ಬಾಂಬೆ ಊಟ ನಿಮಗೆ ಸೆಟ್ ಆಗಲ್ಲ. ನಿಮಗೆಲ್ಲ ನಾನು ಊಟ ತಂದುಕೊಡ್ತೀನಿ ಅಂದಿದ್ರು ನಾರಾಯಣಗೌಡ. ಅದಕ್ಕೆ ಮುಖ್ಯಮಂತ್ರಿಗಳಿಗೆ ನಾರಾಯಣಗೌಡರ ಮೇಲೆ ವಿಶೇಷವಾದ ಪ್ರೀತಿ.
ಮಂಡ್ಯದಲ್ಲಿ ಹುಟ್ಟಿ, ಬಾಂಬೆಗೆ ಹೋಗಿ ಅಲ್ಲಿ ಸಾಮ್ರಾಜ್ಯವನ್ನ ಸ್ಥಾಪನೆ ಮಾಡಿದ್ರು.
ಬಾಂಬೆಯಲ್ಲಿರುವ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು, ನಮ್ಮ ಊಟೋಪಚಾರ ಮಾಡಿದವರು ನಾರಾಯಣಗೌಡರು. ಇವತ್ತು ಅವರನ್ನ ನೆನೆಸಿಕೊಳ್ಳಬೇಕು ಎಂದು ಬಾಂಬೆಯ ಆ ದಿನಗಳನ್ನ ಸ್ಮರಿಸುತ್ತಾ, ನಾರಾಯಣಗೌಡರನ್ನ ಹಾಡಿ ಹೊಗಳಿದರು.

….
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.

LEAVE A REPLY

Please enter your comment!
Please enter your name here

- Advertisment -

Most Popular

‘ಘಟನೆಯ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಲಿ ಪ್ರಸನ್ನ್ ಕುಮಾರ್ ಆಗ್ರಹ’

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟಕದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಒಂದು ಲೋಡ್ ಸ್ಪೋಟಕ ವಸ್ತುಗಳು ನಗರಕ್ಕೆ ಬಂದಿದ್ದು ಹೇಗೆ. ನಗರಕ್ಕೆ ಬರುವ...

ಉಸಿರು ಕಟ್ಟಿಸುವ ವಾತಾವರಣವೇ ಪಕ್ಷ ಬಿಡಲು ಕಾರಣ: ರಾಜಣ್ಣ ಕೊರವಿ

ಹುಬ್ಬಳ್ಳಿ: ಜೆಡಿಎಸ್ ಪಕ್ಷದಲ್ಲಿನ ಉಸಿರು ‌ಕಟ್ಟಿಸಿವ ವಾತಾವರಣದಿಂದ ಬೆಸತ್ತು ನಾನು ಹಾಗೂ ನನ್ನ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ‌ ರಾಜಣ್ಣ ಕೊರವಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ...

‘ಉದ್ದವ್ ಠಾಕ್ರೆ ವಿರುದ್ಧ ಸಿಡಿದೆದ್ದ ಕರವೇ‌ ಕಾರ್ಯಕರ್ತರು’

ಹುಬ್ಬಳ್ಳಿ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಶಿವಸೇನಾ ವಿರುದ್ದ ಸಿಡಿದೆದ್ದ ಕರವೇ ಯುವಸೇನಾ ಕಾರ್ಯಕರ್ತರು ಕರವೇ...

‘ಮೃತ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ’

ಶಿವಮೊಗ್ಗ: ಕಲ್ಲು ಕ್ವಾರಿ ದುರಂತಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಧಿಗ್ಬ್ರಮೆಗೊಂಡಿದ್ದಾರೆ. ಸ್ಪೋಟದಿಂದ ಜೀವ ಹಾನಿಯಾಗಿರೋದು ನೋವಿನ ಸಂಗತಿ. ಇಂತಹದೊಂದು ದುರಾದೃಷ್ಟಕರ ಘಟನೆ ನೆಡೆಯಬಾರದಿತ್ತು. ಮೃತರ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವೇ...

Recent Comments