ಸರ್ಜಿಕಲ್ ಸ್ಟ್ರೈಕ್​ ವಿಚಾರ ಹಿಡಿದು ರಾಜಕೀಯ ಮಾಡೋದು ನಿಲ್ಲಿಸಿ: ಗೀತಾ ಶಿವರಾಜ್​ ಕುಮಾರ್

0
349

ಶಿವಮೊಗ್ಗ: ರಾಮ ಮಂದಿರ ಹಾಗೂ ಸರ್ಜಿಕಲ್ ಸ್ಟ್ರೈಕ್ ವಿಷಯವನ್ನು ಹಿಡಿದು ಬಿಜೆಪಿ ನಾಯಕರು ರಾಜಕೀಯ ಮಾಡುವುದನ್ನು ಬಿಡಿ ಅಂತ ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್​ ಕುಮಾರ್ ಸಹೋದರನ ಪರ ಕ್ಯಾಂಪೇನ್ ನಡೆಸಿದ್ದಾರೆ.

ಈ ಸಂದರ್ಭ ಮಾತನಾಡಿದ ಅವರು, “ತೀರ್ಥಹಳ್ಳಿ, ಸಾಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಪ್ರಚಾರ ನಡೆಸಿದ್ನೆದೇ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತದಾರರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಎರಡು ಪಕ್ಷಗಳ ನಾಯಕರು, ಮುಖಂಡರು ಒಟ್ಟಾಗಿ ಪ್ರಚಾರ ನಡೆಸುತ್ತಿದ್ದು, ಬೇರೆಡೆ ಇರುವ ಗೊಂದಲ ಇಲ್ಲಿಲ್ಲ. ಬಿಜೆಪಿಯವರಿಗೆ ನೇರವಾಗಿ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ನಾನೊಬ್ಬ ಸಾಮಾನ್ಯ ನಾಗರಿಕಳಾಗಿ ಮನವಿ ಮಾಡಿಕೊಳ್ಳುತ್ತೇನೆ. ಸರ್ಜಿಕಲ್​ ಸ್ಟ್ರೈಕ್​ ಹಾಗೂ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಡೋದನ್ನು ನಿಲ್ಲಿಸಿ “ಎಂದು ಬಿಜೆಪಿ ನಾಯಕರಿಗೆ ಗೀತಾ ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here