ಬೆಂಗಳೂರು: ಇಂದಿನಿಂದ ರಾಜ್ಯಾದ್ಯಾಂತ ಪೊಗರು ಸಿನಿಮಾ ಕನ್ನಡ, ತೆಲಗು, ತಮಿಳುನಲ್ಲಿ ರಿಲೀಸ್ ಆಗಿದೆ.
ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗಿದೆ. ಮೂರು ವರ್ಷದ ಬಳಿಕ ಅದ್ಧೂರಿ ಧೃವ ಸರ್ಜಾ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಹಲೆವೆಡೆ ಬೆಳಿಗ್ಗೆ 6 ಗಂಟೆಯಿಂದ ಶೋ ಪ್ರಾರಂಭವಾಗಿದೆ. ಲಾಕ್ ಡೌನ್ ಬಳಿಕ ರಿಲೀಸ್ ಆದ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಿದೆ.
ಪೊಗರು ಸಿನಿಮಾದ ಹಾಡು, ಡೈಲಾಗ್ ಗಳು ಈಗಾಗಲೇ ಹವಾ ಕ್ರಿಯೆಟ್ ಮಾಡಿದೆ. ಕರ್ನಾಟಕದಲ್ಲಿ 255 ಸಿಂಗಲ್ ಸ್ಕ್ರೀನ್, 55 ಮಲ್ಟಿಪ್ಲೆಕ್ಸ್ ಗಳಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗಿದೆ. ಪ್ರಸನ್ನ ಥಿಯೇಟರ್ ನಲ್ಲಿ ಧೃವ ಅಜ್ಜಿ ಫಸ್ಟ್ ಡೇ ಫಸ್ಟ್ ಶೋ ನೋಡಿದ್ದಾರೆ. ಥಿಯೇಟರ್ ಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.