Sunday, May 29, 2022
Powertv Logo
Homeರಾಜ್ಯರಾಮನಗರ ಆಗುತ್ತಾ 'ನವ ಬೆಂಗಳೂರು'?

ರಾಮನಗರ ಆಗುತ್ತಾ ‘ನವ ಬೆಂಗಳೂರು’?

ಬೆಂಗಳೂರು: ರಾಮನಗರ ಜಿಲ್ಲೆಯನ್ನು ಮರು ನಾಮಕರಣ ಮಾಡಿ ನವ ಬೆಂಗಳೂರು ಎಂದು ಹೆಸರಿಡಲು ಸರ್ಕಾರ ಚಿಂತನೆ ನಡೆಸಿದೆ.

ರಾಮನಗರ ಹೆಸರು ಕೇಳಿದ್ರೆ ಹೂಡಿಕೆದಾರರ ಹಿಂದೇಟು ಹಾಕುವ ಹಿನ್ನೆಲೆಯಲ್ಲಿ, ಹೂಡಿಕೆದಾರರ ಗಮನ ಸೆಳೆಯಲು ಸರ್ಕಾರದ ಈ ಹೊಸ ಪ್ರಯತ್ನಕ್ಕೆ ಮುಂದಾಗಿದೆ. 

ರಾಮನಗರ ಬೆಂಗಳೂರಿಗೆ ಅಂಟಿಕೊಂಡಿದ್ದರೂ ಹೂಡಿಕೆದಾರರಲ್ಲಿ ಬಹು ದೂರವಿರುವ ಜಿಲ್ಲಾಕೇಂದ್ರವೆಂಬ ದೃಷ್ಟಿಯಿದೆ. ಹೀಗಾಗಿ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ರಾಮನಗರವನ್ನು ‘ನವ ಬೆಂಗಳೂರು’ ಎಂದು ಮರು ನಾಮಕರಣ ಮಾಡಿ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಸರ್ಕಾರದ್ದಾಗಿದೆ. 

ಅಲ್ಲದೆ ಜಿಲ್ಲೆಗೆ ಬೆಂಗಳೂರು (ಗ್ರಾ) ಜಿಲ್ಲೆಯ ಕೆಲ ತಾಲೂಕುಗಳ ಸೇರ್ಪಡೆ ಬಗ್ಗೆಯೂ ಸರ್ಕಾರ ಚಿಂತನೆ ಮಾಡುವಂತೆ ಬಿಜೆಪಿಯವರೇ ಸಿಎಂ ಬಳಿ ಪ್ರಸ್ತಾಸಿದ್ದಾರೆಂದು ತಿಳಿದುಬಂದಿದೆ. ಈ ಹಿಂದೆ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಡಲು ಡಿಕೆಶಿ ಪ್ರಸ್ತಾಪಿಸಿದನ್ನು ಕೂಡ ಈ ವೇಳೆ ಸ್ಮರಿಸಿಕೊಳ್ಳಬಹುದು. 

LEAVE A REPLY

Please enter your comment!
Please enter your name here

- Advertisment -

Most Popular

Recent Comments