ಬೆಂಗಳೂರು: ಇಂದಿನಿಂದ 5 ದಿನಗಳ ಕಾಲ ವಿಧಾನಮಂಡಲ ಜಂಟಿ ಅಧಿವೇಶನವು ನಡೆಯಲಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಸುತ್ತಿರುವ ಮೊದಲ ಅಧಿವೇಶನವಾಗಿದೆ. ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಈಗಾಗಲೇ ಸಜ್ಜಾಗಿವೆ.
ಅಧಿವೇಶನದಲ್ಲಿ ಮಂಗಳೂರು ಸಿಎಎ ಗಲಭೆ, ನೆರೆ ಪರಿಹಾರ ವಿಳಂಬ, ಬೀದರ್ ಶಾಹಿನ್ ಶಾಲೆ ವಿವಾದ ಪ್ರಕರಣ ಹಾಗೂ ಅನುದಾನ ಕಡಿತ ಸೇರಿದಂತೆ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷಗಳು ಈಗಾಗಲೇ ಯೋಜನೆಗಳನ್ನು ಹಾಕಿಕೊಂಡಿದೆ.