Home ದೇಶ-ವಿದೇಶ ಹಸಿವು ತಾಳಲಾಗದೆ ಮಣ್ಣು ತಿಂದು ಸಾವನ್ನಪ್ಪಿದ ಕಂದಮ್ಮಗಳು..!

ಹಸಿವು ತಾಳಲಾಗದೆ ಮಣ್ಣು ತಿಂದು ಸಾವನ್ನಪ್ಪಿದ ಕಂದಮ್ಮಗಳು..!

ಕಿತ್ತು ತಿನ್ನುವ ಬಡತನದಿಂದ ಒಂದು ತುತ್ತು ಊಟವೂ ಸಿಗದೇ ಇಬ್ಬರು ಪುಟಾಣಿಗಳು ಮಣ್ಣು ತಿಂದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. 
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಮೂಲದ ಸಂತೋಷ್ (3) ಮತ್ತು ವೆನ್ನೆಲಾ (2) ಮೃತಪಟ್ಟ ಕಂದಮ್ಮಗಳು. ಬಾಗೇಪಲ್ಲಿ ಮೂಲದ ಮಹೇಶ್ ಹಾಗೂ ನಾಗಮಣಿ ದಂಪತಿ ಹಾಗೂ ಕೆಲ ಸಂಬಂಧಿಕರು ಕೆಲವು ವರ್ಷಗಳ ಹಿಂದಷ್ಟೇ ಅನಂತಪುರ ಜಿಲ್ಲೆಯ ಕದ್ರಿ ಮಂಡಲದ ಕುಮ್ಮಾರವಂಡಲಪಲ್ಲೆ ಗ್ರಾಮಕ್ಕೆ ವಲಸೆ ಹೋಗಿದ್ದರಯ. ಅಲ್ಲಿನ ಹಮಾಲಿ ಕಾಲೋನಿಯಲ್ಲಿ ಪುಟ್ಟದಾದ ಗುಡಿಸಲಲ್ಲಿ ಈ ಕುಟುಂಬ ವಾಸವಿತ್ತು.
ಮಹೇಶ್ ಮತ್ತು ನಾಗಮಣಿ ಜೊತೆಗೆ ಅವರ 5 ಮಂದಿ ಮಕ್ಕಳು, ನಾಗಮಣಿಯ ತಾಯಿ, ಸೋದರಿಯ ಮಗು ಕೂಡ ಇತ್ತು. ಮಹೇಶ್-ನಾಗಮಣಿ ಕೆಲಸಕ್ಕೆ ಹೋಗುತ್ತಿದ್ದರು. ನಾಗಮಣಿಯ ತಾಯಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಈ ಮೂವರು (ಮಹೇಶ್, ನಾಗಮಣಿ ಮತ್ತು ಆಕೆಯ ತಾಯಿ) ಮದ್ಯವ್ಯಸನಿಗಳಾಗಿದ್ದು ಮಕ್ಕಳ ಊಟ-ಉಪಚಾರದ ಬಗ್ಗೆ ಅಷ್ಟೇನು ಗಮನಕೊಡ್ತಾ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಮಕ್ಕಳು ಹಸಿವು ತಾಳಲಾಗದೆ ಮಣ್ಣು ತಿಂದು ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ.
ಮಹೇಶ್-ನಾಗಮಣಿ ದಂಪತಿಯ 3 ವರ್ಷದ ಮಗು ಸಂತೋಷ್​ 6 ತಿಂಗಳ ಹಿಂದೆ ಮೃತಪಟ್ಟಿತ್ತು. ಈ ವಿಷಯವನ್ನು ಮುಚ್ಟಿಟ್ಟು ಮಣ್ಣುಮಾಡಿದ್ದರು. ಈಗ ನಾಗಮಣಿಯ ಸಹೋದರಿಯ 2 ವರ್ಷದ ಮಗು ವೆನ್ನೆಲಾ ಮೃತಪಟ್ಟಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿರೋ ಅಧಿಕಾರಿಗಳು ಕುಟುಂಬದ ಉಳಿದ ಮಕ್ಕಳನ್ನು ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ಸೇರಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments