ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ: ರಾಹುಲ್​ ಗಾಂಧಿ

0
279

ದೆಹಲಿ: ಪುಲ್ವಾಮಾ ಘಟನೆಗೆ ಸಂತಾಪ ಸೂಚಿಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಈ ಕಷ್ಟದ ಸಮಯದಲ್ಲಿ ಸರ್ಕಾರವನ್ನು ಬೆಂಬಲಿಸಿ, ಸೈನಿಕರ ಜೊತೆಗಿರುವುದಾಗಿ ಹೇಳಿದ್ದಾರೆ. ಪತ್ರಕರ್ತರ ಇತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್​ ಗಾಂಧಿ ಇನ್ನೆರಡು ದಿನ ಬೇರೆ ಯಾವ ವಿಚಾರಗಳ ಕುರಿತು ಮಾತನಾಡುವುದಿಲ್ಲ ಅಂತ ಹೇಳಿದ್ದಾರೆ.

ನಾನು ಹಾಗೂ ಕಾಂಗ್ರೆಸ್ ಪಕ್ಷ ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಈ ನೋವಿನ ಸಂದರ್ಭದಲ್ಲಿ ನಮ್ಮ ಸೈನಿಕರ ಜೊತೆಗಿರುತ್ತೇವೆ. ಇದು ಸೂತಕದ ಸಮಯ. ಬೇಸರದ ಸಮಯ. ಹುತಾತ್ಮರಿಗೆ ಗೌರವ ನೀಡುವ ಸಮಯ ಎಂದಿದ್ದಾರೆ. ಗುರುವಾರ ಜುಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್​ಪಿಎಫ್ ಐದರ ವಾಹನ ಮೇಲೆ ನಡೆದ ದಾಳಿಯಲ್ಲಿ 38 ಜನ ಯೋಧರು ಹುತಾತ್ಮರಾಗಿದ್ದಾರೆ.

LEAVE A REPLY

Please enter your comment!
Please enter your name here