ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ವಿದೇಶದಿಂದ ವಾಪಾಸ್ಸಾಗುವವರ ಕೈಗೆ ಬೆಂಗಳೂರು ಏರ್ಪೋರ್ಟ್ನಲ್ಲಿ ಸ್ಟ್ಯಾಂಪ್ ಹಾಕುವ ಪ್ರಕ್ರಿಯೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಕಟ್ಟೆಚ್ಚರವನ್ನು ವಹಿಸುತ್ತಿದ್ದು, ವಿದೇಶಗಳಿಂದ ಬೆಂಗಳೂರಿಗೆ ಬರುವವರನ್ನು 14 ದಿನಗಳ ಕಾಲ ಪ್ರತ್ಯೇಕೀಕರಣಕ್ಕೆ ಒಳಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಹಾಗಾಗಿ ವಿದೇಶಗಳಿಂದ ಬರುವವರ ಕೈಗೆ ಸ್ಟ್ಯಾಂಪ್ ಹಾಕಲಾಗುತ್ತದೆ. ಈ ರೀತಿ ಸ್ಟ್ಯಾಂಪ್ ಹಾಕಿಸಿಕೊಂಡ ವ್ಯಕ್ತಿ 14 ದಿನ ಸ್ವಯಂಪ್ರೇರಿತವಾಗಿ ಮನೆಯಲ್ಲಿ ಏಕಾಂತ ವಾಸದಲ್ಲಿರಬೇಕು. ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ ಅಂತ ದೃಢಪಟ್ಟ ಮೇಲಷ್ಟೇ ಅವರು ಮನೆಯಿಂದ ಹೊರಬರಬಹುದು. ಒಂದು ವೇಳೆ ಸ್ಟ್ಯಾಂಪ್ ಹಾಕಿಸಿಕೊಂಡ ವ್ಯಕ್ತಿ ನಿಗದಿಗೂ ಮುನ್ನ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ತಕ್ಷಣ ಆರೋಗ್ಯ ಇಲಾಖೆಗೆ ಆತನ ಬಗ್ಗೆ ಮಾಹಿತಿ ನೀಡಬೇಕೆಂದು ಆರೋಗ್ಯ ಇಲಾಖೆ ಆದೇಶಿಸಿದೆ.
zithromax online
zithromax 250 mg