Thursday, October 6, 2022
Powertv Logo
Homeದೇಶಜೂನ್ 8 ರಿಂದ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ : ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಜೂನ್ 8 ರಿಂದ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ : ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಹೊಸದಿಲ್ಲಿ: ಜೂನ್ 1 ರಿಂದ ಲಾಕ್​ಡೌನ್ 5.O ಪ್ರಾರಂಭವಾಗಿದ್ದು, ಜೂನ್ 8 ರಿಂದ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಕಂಟೈನ್ಮೆಂಟ್ ಝೋನ್​ಗಳಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ. ಹಾಗಾದ್ರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಏನೇನಿದೆ?

  • ವಿಗ್ರಹಗಳು, ಪವಿತ್ರ ಪುಸ್ತಕಗಳು ಇತ್ಯಾದಿಗಳನ್ನು ಮುಟ್ಟಬಾರದು
  • ಪ್ರಾರ್ಥನಾ ಮಂದಿರಗಳ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್‌ ಸ್ಯಾನಿಟೈಸರ್‌ ವಿತರಕ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ
  • ರೋಗ ಲಕ್ಷಣ ರಹಿತ ಭಕ್ತಾದಿಗಳಿಗೆ ಮಾತ್ರ ಪ್ರಾರ್ಥನಾ ಮಂದಿರದ ಒಳಗಡೆ ಪ್ರವೇಶ
  • ಫೇಸ್ ಮಾಸ್ಕ್‌ ಧರಿಸಿದ್ದರೆ ಮಾತ್ರ ಪ್ರವೇಶಕ್ಕೆ ಅನುಮತಿ
  • ಶೂ ಅಥವಾ ಪಾದರಕ್ಷೆಗಳನ್ನು ಸ್ವಂತ ವಾಹನದೊಳಗೆ ಬಿಡಬೇಕು. ಅಗತ್ಯವಿದ್ದರೆ ಮಾತ್ರ ಅವುಗಳನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಬೇಕು.
  • ಪರಸ್ಪರ ಶುಭಾಶಯ ಕೋರುವಾಗ ದೈಹಿಕ ಸಂಪರ್ಕ ಬೇಡ. ದೂರದಿಂದಲೇ ಶುಭಾಶಯ ತಿಳಿಸಿ
  • ಪ್ರಸಾದ ವಿತರಣೆ ಅಥವಾ ತೀರ್ಥ ನೀಡುವ ಪ್ರಕ್ರಿಯೆಗಳು ಬಂದ್ ​​
  • ದೊಡ್ಡ ಪೂಜಾ ಕಾರ್ಯಕ್ರಮ, ಸಭೆಗಳನ್ನು ನಿಷೇಧಿಸಲಾಗಿದೆ
  • ಗಾಯಕರು ಅಥವಾ ಹಾಡುಗಾರರ ಗುಂಪುಗಳಿಗೆ ಅನುಮತಿ ಇಲ್ಲ. ಸಾಧ್ಯವಾದಷ್ಟು ರೆಕಾರ್ಡ್ ಮಾಡಲಾದ ಭಕ್ತಿ ಗೀತೆ ಹಾಕಬಹುದು
  • ಭಕ್ತರು ಪ್ರಾರ್ಥನೆ ಮಾಡಲು ಕಡ್ಡಾಯವಾಗಿ ಮ್ಯಾಟ್​ ಬಳಸಬೇಕು. ದೇಗುಲಕ್ಕೆ ಬರುವ ಭಕ್ತರು ತಮ್ಮದೇ ಆದ ಮ್ಯಾಟ್ ತರಬೇಕು  

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments