Saturday, October 1, 2022
Powertv Logo
Homeಕ್ರೈಂಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿತ

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿತ

ಮೈಸೂರು: ಅಪ್ರಾಪ್ತ ಬಾಲಕಿಯನ್ನ ಗೌಪ್ಯವಾಗಿ ಮದುವೆಯಾದ ಭೂಪನೊಬ್ಬ ಮದುವೆಗೆ ವಿರೋಧ ವ್ಯಕ್ತಪಡಿಸಿದ ಬಾಲಕಿ ಅಣ್ಣನಿಗೆ ಚಾಕುವಿನಿಂದ ಇರಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಒಂದೂವರೆ ತಿಂಗಳ ಹಿಂದೆ ಅಪ್ರಾಪ್ತ ಯುವತಿಯನ್ನು ಮಾದೇಶ್ ಎಂಬಾತ ಮದುವೆಯಾಗಿದ್ದ.

ಮಲ್ಲಹಳ್ಳಿ ಗ್ರಾಮದ ಬಸವನಾಯ್ಕ್ ಪುತ್ರನಾಗಿರುವ ಮಾದೇಶ್ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವ ಬಗ್ಗೆ ಮಲ್ಲಹಳ್ಳಿ ಗ್ರಾಮದ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಾಲಕಿಯ ಅಣ್ಣನಾಗಿರುವ ನಾಗೇಶ್ ಎಂಬುವವರು ಪ್ರಶ್ನೆ ಮಾಡಿದ್ದರು. ಬಾಲಕಿ ನಾಗೇಶ್ ಚಿಕ್ಕಪ್ಪನ ಮಗಳು. ಹೀಗಾಗಿ ನಾಗೇಶ್ ಮಾದೇಶ್​ನನ್ನು ಪ್ರಶ್ನಿಸಿದ್ದ. ಆದರೆ ಮಾದೇಶ್ ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಆದರೆ ಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisment -

Most Popular

Recent Comments