ಬಳ್ಳಾರಿ : ಕೊರೊನಾ ರೋಗಿಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಮೊಕಾ ರಸ್ತೆಯ ರುದ್ರಭೂಮಿಯಲ್ಲಿ ರೋಗಿಯ ಶವ ಮಣ್ಣು ಮಾಡುವುದಕ್ಕೆ ಜನ ಆಕ್ಷೇಪಿಸಿದರು. ಈ ಸಂಬಂಧ ಸ್ಥಳೀಯರು ಪ್ರತಿಭಟನೆ ಸಹ ನಡೆಸಿದ್ರು. ಇದಕ್ಕೆ ಶಾಸಕ ಸೋಮಶೇಖರ್ ಸಹ ಸಾಥ್ ನೀಡಿದ್ರು. ಬೆಳಗ್ಗೆಯಷ್ಟೇ ಒಬ್ಬ ಮಹಿಳೆ ಸಾವನ್ನಪ್ಪಿದ್ದಳು. ಆಕೆಯ ಶವಸಂಸ್ಕಾರ ಮಾಡಲು ಹೋದಾಗ ಇಷ್ಟೆಲ್ಲ ಜಟಾಪಟಿ ನಡೆದಿದೆ.
ಊರೊಳಗೆ ಬೇಕಾದಷ್ಟು ರುದ್ರಭೂಮಿ ಇವೆ ಅಲ್ಲಿ ಮಣ್ಣುಮಾಡಿ ಇಲ್ಲಿ ಬೇಡ ಅಂತ ಸ್ಥಳಿಯರು ಜಿಲ್ಲಾಡಳಿತದ ಜೊತೆ ಕೆಲಕಾಲ ವಾಗ್ವಾದ ಮಾಡಿದರು. ಹತ್ತಿರದಲ್ಲೇ ಕುಡಿಯುವ ನೀರಿನ ಟ್ಯಾಂಕ್ ಇದ್ದು ವೈರಸ್ ವ್ಯಾಪಿಸಿದ್ರೆ ಇಡೀ ಊರೇ ಸಾವಿನಲ್ಲಿ ಮುಳುಗಬೇಕಾಗುತ್ತದೆ ಎಂದ್ರು. ಆದ್ರೆ ಜಿಲ್ಲಾಡಳಿತ ಪಟ್ಟು ಬಿಡದೇ ಅದೇ ರುದ್ರಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಿತು. ಇದೊಂದು ಸಲ ಇಲ್ಲೇ ಮಾಡುತ್ತೇವೆ ಮುಂದೆ ಸಾವು ಸಂಭವಿಸಿದಲ್ಲಿ ಬೇರೆ ಕಡೆ ಮಾಡುತ್ತೇವೆ ಅಂತ ಹೇಳಿ ಶವಸಂಸ್ಕಾರದ ಮುಗಿಸಿದರು. ಎಲ್ಲಾ ರೀತಿಯ ಕೊವಿಡ್ ನಿಯಮಾವಳಿ ಪ್ರಕಾರ ಮಣ್ಣು ಮಾಡಲಾಯಿತು.