ಬೆಂಗಳೂರು : SSLC ಫಲಿತಾಂಶ ಪ್ರಕಟದ ಗೊಂದಲಕ್ಕೆ ತೆರೆಬಿದ್ದಿದ್ದು, ಆಗಸ್ಟ್ 10 ರಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗುತ್ತದೆ.
ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದು, ಆಗಸ್ಟ್ 10 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುವುದಾಗಿ ತಿಳಿಸಿದ್ದಾರೆ. ಕೊವಿಡ್ ಆತಂಕದ ನಡುವೆ 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆಗಸ್ಟ್ 10ರಂದು ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗಲಿದೆ. ಆನ್ಲೈನ್ ಮೂಲಕ ಕೂಡ ಅದೇ ದಿನ ಫಲಿತಾಂಶ ನೋಡಬಹುದು.