ಅಷ್ಟಕ್ಕೂ ಶ್ರುತಿ ಚೆನ್ನೈಗೆ ಹೋಗಿದ್ದೇಕೆ? ಚೆನ್ನೈನಲ್ಲೇ ರೆಡಿಯಾಯ್ತು ಈ ಸ್ಕೆಚ್..!

0
152

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರೋ ನಟಿ ಶ್ರುತಿ ಹರಿಹರನ್ ಇಂದು ಸರ್ಜಾ ವಿರುದ್ಧ ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ.
ಈಗ ಕಾಡ್ತಿರೋ ಒಂದು ಪ್ರಶ್ನೆ ಶ್ರುತಿ ಚೆನ್ನೈಗೆ ಹೋಗಿದ್ದಾದ್ರೂ ಏಕೆ ಅನ್ನೋದು. ಶ್ರುತಿ ಚೆನ್ನೈಗೆ ಹೋಗಿದ್ದು ಒಬ್ಬ ಪಂಚಭಾಷಾ ನಟನನ್ನು ಮೀಟ್ ಆಗಿ #MeToo ಬಗ್ಗೆ ಡಿಸ್ಕಸ್ ಮಾಡೋಕೆ.
ಆ ಪಂಚಭಾಷಾ ಆ್ಯಕ್ಟರ್ ಶ್ರುತಿಗೆ ಸಾಥ್ ನೀಡಿ, ಕಂಪ್ಲೇಂಟ್ ಕೊಡುವಂತೆ ಫರ್ಮಾನು ಹೊರಡಿಸಿದ್ರು ಅನ್ನೋದು ತಿಳಿದುಬಂದಿದೆ.‌
ಅಸಲಿಗೆ ಶ್ರುತಿ ಚೆನ್ನೈಗೆ ಹೋಗಿದ್ದು ಇದೇ ಕಾರಣಕ್ಕೆ ಅನ್ನೋ ಮಾತು ಕೇಳಿಬರ್ತಿದೆ. ಚೆನ್ನೈನಲ್ಲಿ ಅರ್ಜುನ್ ಸರ್ಜಾ ವಿರುದ್ಧ ಎಲ್ಲೆಲ್ಲಿ? ಏನೇನು ಕಂಪ್ಲೇಂಟ್ ಕೊಡ್ಬೇಕು ಅಂತ ಮಾಸ್ಟರ್ ಪ್ಲಾನ್ ಮಾಡಿ ಸ್ಕೆಚ್ ರೂಪಿಸಲಾಗಿತ್ತಂತೆ.
ಕಂಪ್ಲೇಂಟ್ ಕೊಡ್ಬೇಕಾದ್ರೆ ಯಾವ್ಯಾವ ಸೆಕ್ಷ‌‌‌ನ್ ಬೀಳುತ್ತೆ ಅಂತ ಲಾಯರ್ಸ್ ಜೊತೆ ಚರ್ಚೆ ಕೂಡ ನಡೆದಿತ್ತು ಅಂತ ಹೇಳಲಾಗ್ತಿದೆ. ಶ್ರುತಿ ಚೆನ್ನೈ ನಲ್ಲೇ ಕೂತು ಬೆಂಗಳೂರಲ್ಲಿರುವ ತಮ್ಮ ವಕೀಲರಿಗೆ ಕಾಲ್ ಮಾಡಿ ಸಂಬಂಧ ಪಟ್ಟ ಸೆಕ್ಷನ್ ಗಳ ಬಗ್ಗೆ ಕೇಳ್ಕೊಂಡಿದ್ರಂತೆ.
ಹೀಗೆ ಪಂಚಭಾಷಾ ನಟರೊಬ್ಬರ ಮುಂದಾಳತ್ವದಲ್ಲಿ ಮೀಟಿಂಗ್ ಮಾಡಿ ಅರ್ಜುನ್ ವಿರುದ್ಧ ಕಂಪ್ಲೇಂಟ್ ಪ್ಲಾನ್ ಮಾಡಲಾಗಿದೆ ಅನ್ನೋದು ಸದ್ಯದ ಬಿಸಿ ಬಿಸಿ ನ್ಯೂಸ್.

LEAVE A REPLY

Please enter your comment!
Please enter your name here