ಕಲಬುರಗಿ : ಮಸೀದಿಗಳ ಮೇಲಿನ ಅನಧಿಕೃತ ಮೈಕ್ಗಳನ್ನು ತೆರವುಗೊಳಿಸುವ ವಿಚಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ತಿದೆ. ನೆರೆಯ ಮಹಾರಾಷ್ಟ್ರದಲ್ಲಿ ಈಗಾಗಲೇ MNS ಮುಖಂಡ ರಾಜ್ ಠಾಕ್ರೆ, ಮೈಕ್ಗಳ ತೆರವಿಗೆ ಮೇ 3 ರವರೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಇದಕ್ಕೆ ಸರ್ಕಾರ ಸೊಪ್ಪು ಹಾಕದ ಹಿನ್ನೆಲೆ ಮೇ 3 ರಂದು ರಂಜಾನ್ ದಿನದಂದು ಮಹಾಮಂಗಳಾರತಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ರಾಜ್ಠಾಕ್ರೆ ನಿಲುವನ್ನ ಶ್ರೀರಾಮಸೇನೆ ಸ್ವಾಗತಿಸಿದೆ. ಈ ಬಗ್ಗೆ ಮಾತನಾಡಿದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ನಮ್ಮ ರಾಜ್ಯದಲ್ಲಿಯೂ ಸಹ ರಂಜಾನ್ ದಿನದಂದು ಮಸೀದಿಗಳ ಮೇಲಿನ ಅನಧಿಕೃತ ಮೈಕ್ಗಳ ತೆರವುಗೊಳಿಸದ್ದನ್ನು ವಿರೋಧಿಸಿ ಮಹಾಮಂಗಳಾರತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸುತ್ತೇವೆ ಅಂತ ಹೇಳಿದ್ರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ ಆದೇಶ ಪಾಲನೆ ಎಲ್ಲರ ಕರ್ತವ್ಯ.ಅವರು ಕೂಡ ಉಲ್ಲಂಘನೆ ಮಾಡಲ್ಲ,ಪಾಲಿಸಬೇಕಿದೆ ಅಂತಾ ಹೇಳಿದರು.
ಅದೆನೇ ಇರಲಿ ಧರ್ಮ ಸಂಘರ್ಷದ ಕೇಂದ್ರ ಬಿಂದುವಾಗಿರೋ ರಾಜ್ಯದಲ್ಲಿ ಇದೀಗ ಮತ್ತೊಂದು ಸುತ್ತಿನ ಧರ್ಮದಂಗಲ್ಗೆ ವೇದಿಕೆ ಸಜ್ಜಾಗಿದ್ದು, ಇದನ್ನ ತಡೆಯಲು ಸರ್ಕಾರ ಯಾವ ರೀತಿಯ ಕ್ರಮಗಳನ್ನ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.