ಚಿಕ್ಕಮಗಳೂರು : ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಹಳ ಪ್ರಾಮಾಣಿಕ ವ್ಯಕ್ತಿ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ, ಅವರ ಬಳಿ ಕಂದಾಯ ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದು ತಪ್ಪು, ಅವರು ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕೆಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಗ್ರಹ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ರಿಜಿಸ್ಟ್ರಾರ್ ವೇಳೆ ಒಂದು ರೂಪಾಯಿ ಉಳಿದ್ರು ಅದನ್ನ ವಾಪಸ್ಸು ಕೊಡದೇ ಯಾರನ್ನು ಕಳುಹಿಸುವುದಿಲ್ಲ, ಅವರಿಗೆ ಶ್ರೀಮಂತರು, ಬಡವರು ಎಲ್ಲಾರು ಒಂದೇ, ಶೃಂಗೇರಿ ಚೆಲುವರಾಜ್ ಬಂದ ಮೇಲೆ ಅವರ ವಿರುದ್ಧ ಯಾವುದೇ ದೂರುಗಳು ಬಂದಿಲ್ಲ. ಅವರು ಪ್ರಾಮಾಣಿಕ ಅಂತ ಗೊತ್ತಿದ್ರು ದುಡ್ಡು ಕೇಳಿದ್ರೆ ಎಲ್ಲಿ ಕೊಡ್ತಾರೆ ಹೇಳಿ. ಹಣ ಕೊಡಲು ಸಾಧ್ಯವಾಗೋದಾದ್ರು ಹೇಗೆ, ಸಂಬಳದ ಹಣದಲ್ಲಿ ಕೊಡಬೇಕು ಅಷ್ಟೇ ಎಂದು ಗಂಗಾಧರ್ ವಿರುದ್ಧ ಶಾಸಕರು ಕಿಡಿಕಾರಿದ್ರು. ಇನ್ನು ಅಧಿಕಾರಿಗಳ ಸಂಬಳದಿಂದ ಪಿಎ ಗಳನ್ನ ಸಾಕುವುದಕ್ಕೆ ಆಗುವುದಿಲ್ಲ, ಬಿಜೆಪಿ ಸರ್ಕಾರದಲ್ಲಿ ಪಿಎ ಗಳದ್ದೆ ಕಾರುಬಾರು ಜೋರಾಗಿದೆ, ಈ ಫೈಲ್ ಮೇಲೆ, ಕೆಳಗೆ ಮಾಡೋದು ಈ ಪಿಎ ಗಳೇ, ಇದು ಮಂತ್ರಿಗಳಿಗೆ ಗೊತ್ತಿದ್ಯೋ ಇಲ್ವೋ ಗೊತ್ತಿಲ್ಲ, ಮಂತ್ರಿಗಳು ಬಹಳ ಸೂಕ್ಷ್ಮ ವಾಗಿ ಪಿಎ ಗಳನ್ನ ಗಮನಿಸಬೇಕು, ಭ್ರಷ್ಟಾ ಅಧಿಕಾರಗಳ ವಿರುದ್ಧ ಸಚಿವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ರು.
ಸಚಿನ್ ಶೆಟ್ಟಿ