Sunday, May 29, 2022
Powertv Logo
Homeರಾಜ್ಯಸರ್ಕಾರ ಗಂಡಸ್ತನ ಪ್ರದರ್ಶಿಸಬೇಕು : ಮುತಾಲಿಕ್​​

ಸರ್ಕಾರ ಗಂಡಸ್ತನ ಪ್ರದರ್ಶಿಸಬೇಕು : ಮುತಾಲಿಕ್​​

ಹುಬ್ಬಳ್ಳಿ : ಕೋಮುಗಲಭೆ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್​​ ಮುತಾಲಿಕ್​​ ಹೇಳಿದರು.

ಹಳೇ ಹುಬ್ಬಳ್ಳಿ ಪೊಲೀಸ್​​ ಠಾಣೆಗೆ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್​​ ಮುತಾಲಿಕ್ ಆಗಮಿಸಿ ​​ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದರು. ನಂತರ ಗಲಭೆಕೋರರು ಕಲ್ಲು ತೂರಿದ್ದ ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ವಿಷಯದಲ್ಲಿ ಸರ್ಕಾರ ಗಂಡಸ್ಥನ ಪ್ರದರ್ಶಿಸಬೇಕು. ಪೊಲೀಸರು ಗಲಭೆಕೋರರನ್ನು ಬಂಧಿಸಿದ್ದಾರೆ. ಈ  ಹಾಗು ಬಂಧಿತರ ಮೇಲೆ ಕೋಕಾ ಕಾಯ್ದೆ ಹಾಕಬೇಕು. ಸುಲಭವಾಗಿ ಜೈಲಿನಿಂದ ಹೊರ ಬರದ ಹಾಗೆ ಕಠಿಣ ಸೆಕ್ಷನ್​​​​ಗಳನ್ನು ವಿಧಿಸಬೇಕು ಎಂದು ಆಗ್ರಹಿಸಿದರು.

ಅದುವಲ್ಲದೇ ಹಿಂದೂ ದೇವಸ್ಥಾನ ಹಾಗೂ ಹಿಂದೂ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಕೇವಲ 134 ಜನರನ್ನು ಮಾತ್ರ ಬಂಧಿಸಲಾಗಿದೆ. ಇನ್ನು ಹೆಚ್ಚಿನ ಜನರನ್ನು ಬಂಧಿಸಬೇಕು ಎಂದು ಹೇಳಿದರು. ಮತ್ತು ಗಲಭೆ ಹಿನ್ನೆಲೆ, ಅಲ್ತಾಫ್ ಕಿತ್ತೂರು ಹಾಗೂ ಅಲ್ತಾಫ್ ಹಳ್ಳೂರ ಈ ಇಬ್ಬರ ಬಂಧನ ಕೂಡವಾಗಬೇಕು ಎಂದು ಒತ್ತಾಯಿಸಿದರು.

- Advertisment -

Most Popular

Recent Comments