Homeದೇಶ-ವಿದೇಶ2 ವರ್ಷದ ಮಗುವನ್ನು ದೇವರಂತೆ ಕಾಪಾಡಿದ 17ರ ಪೋರ..!

2 ವರ್ಷದ ಮಗುವನ್ನು ದೇವರಂತೆ ಕಾಪಾಡಿದ 17ರ ಪೋರ..!

17 ವರ್ಷದ ಪೋರ 2 ವರ್ಷದ ಮಗುವಿನ ಪಾಲಿಗೆ ದೇವರಾಗಿದ್ದಾನೆ..! ಅಪಾರ್ಟ್​​ಮೆಂಟ್​​ವೊಂದರ 2ನೇ ಫ್ಲೋರ್​ನಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು 17ರ ಹುಡುಗ ಹಿಡಿದಿದ್ದಾನೆ..! ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಅಂದಹಾಗೆ ಈ ಘಟನೆ ನಡೆದಿರೋದು ಇಸ್ತಾಲ್​​ ಬುಲ್​ನ ಫಾತಿಹ್​ ಜಿಲ್ಲೆಯಲ್ಲಿ. ದೊಹಾ ಮಹಮ್ಮದ್​ ಅನ್ನೋ 2 ವರ್ಷದ ಕಂದಮ್ಮ ಬಾಲ್ಕನಿಯಿಂದ ತಲೆಯನ್ನು ಕೆಳಗೆ ಹಾಕುತ್ತಿರೋದನ್ನು ಫೌಜಿ ಜಬಾತ್ ಅನ್ನೋ ಹುಡುಗ ಗಮನಿಸಿದ್ದು, ಅಷ್ಟರಲ್ಲೇ ಆ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಕೂಡಲೇ ಫೌಜಿ ಮಗುವನ್ನು ಎರಡು ಕೈಗಳಿಂದ ಸುರಕ್ಷಿತವಾಗಿ ಹಿಡಿದು ಕಾಪಾಡಿದ್ದಾನೆ.
ಫೌಜಿ ಅಲ್ಜೀರಿಯನ್​ ವಲಸಿಗನಾಗಿದ್ದು, ವರ್ಕ್​​ ಶಾಪ್​ವೊಂದರಲ್ಲಿ ಕೆಲಸ ಮಾಡ್ತಿದ್ದಾನೆ ಅಂತ ತಿಳಿದು ಬಂದಿದ್ದು, ಮುದ್ದಾದ ಮಗುವಿನ ಪಾಲಿಗೆ ದೇವರಾಗಿರುವ ಆ ಹುಡುಗನ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments