Home ರಾಜ್ಯ ಬೆಂಗಳೂರು ಮಾತ್ರವಲ್ಲ, ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತೆ- ಮಾಜಿ ಸಂಸದ ಎಲ್.ಆರ್.ಎಸ್ ಗಂಭೀರ ಆರೋಪ!

ಬೆಂಗಳೂರು ಮಾತ್ರವಲ್ಲ, ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತೆ- ಮಾಜಿ ಸಂಸದ ಎಲ್.ಆರ್.ಎಸ್ ಗಂಭೀರ ಆರೋಪ!

ಮಂಡ್ಯ: ಸ್ಯಾಂಡಲ್​ವುಡ್ ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ಸುದ್ದಿಯಾಗ್ತಿರೋ ವಿಷಯ ಅಂದ್ರೆ ಅದು ಡ್ರಗ್ಸ್ ದಂಧೆ. ಈ ವಿಚಾರವಾಗಿ ರಾಜಕಾರಣಿಯೊಬ್ಬರು ಬಿಚ್ಚಿಟ್ಟಿರುವ ಸ್ಫೋಟಕ ಮಾಹಿತಿ ಇಡೀ ಕರುನಾಡನ್ನೇ ಬೆಚ್ಚಿ ಬೀಳಿಸಿದೆ. ಡ್ರಗ್ಸ್ ದಂಧೆ ಅನ್ನೋದು ಕೇವಲ ಈಗಿನ ದಂಧೆ ಅಲ್ಲವಂತೆ. ಕಳೆದ 20 ವರ್ಷಗಳಿಂದಲೂ ನಡೆದುಕೊಂಡು ಬರ್ತಿದೆ. ಹೊರ ದೇಶಗಳಿಂದ ಬಂದ ಪ್ರಜೆಗಳು ರಾಜಾ ರೋಷವಾಗಿ ರಸ್ತೆಯಲ್ಲೇ ಡ್ರಗ್ಸ್ ಸೇವಿಸುತ್ತಾ, ಮಾರಾಟ ಮಾಡ್ತಿದ್ದಾರೆ. ಡ್ರಗ್ಸ್, ಗಾಂಜಾ ಅನ್ನೋದು ಕೇವಲ ಬೆಂಗಳೂರು ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಸಿಗುತ್ತದೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ಹೌದು, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಇಂದು ಮಂಡ್ಯದ ನಾಗಮಂಗಲಕ್ಕೆ ಆಗಮಿಸಿದ್ರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಮೇಗೌಡ, ಡ್ರಗ್ಸ್ ಬೆಂಗಳೂರು ಮಾತ್ರವಲ್ಲ, ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತೆ. ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇದ್ರಿಂದಾಗಿ ಗ್ರಾಮಾಂತರ ಪ್ರದೇಶಕ್ಕೂ ಡ್ರಗ್ಸ್ ದಂಧೆ ವ್ಯಾಪಿಸುತ್ತಿದೆ ಅಂತಾ ಆತಂಕ ವ್ಯಕ್ತಪಡಿಸಿದರು.

ಹೊರ ದೇಶಗಳ ಪ್ರಜೆಗಳಿಂದಲೇ ಡ್ರಗ್ಸ್ ಮಾರಾಟ : ಹೊರ ದೇಶಗಳಿಂದ ಬಂದಿರೊ ಪ್ರಜೆಗಳು ನಿರ್ಭೀತಿಯಿಂದ ಡ್ರಗ್ಸ್ ಮಾರುತ್ತಿದ್ದಾರೆ. ಬೆಂಗಳೂರಿನ ಕಲ್ಯಾಣ ನಗರದಲ್ಲಿ ನನ್ನದು ಸ್ಕೂಲ್ ಇದೆ. ಆ ರಸ್ತೆಯಲ್ಲಿ ನೈಜೀರಿಯ, ಸೌತ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಮಾಡುತ್ತಾ, ಸೇವನೆ ಮಾಡಿ ನಿಂತಿರುತ್ತಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಆದರೂ ಯಾವುದೇ ಕ್ರಮವಹಿಸಿಲ್ಲ ಅಂತಾ ಆರೋಪಿಸಿದ್ರು. ಸ್ಯಾಂಡಲ್ ವುಡ್ ಈ ಮಟ್ಟಕ್ಕೆ ಆಗಿರೋದು ದುರ್ದೈವ. ಅದರಲ್ಲೂ ಡ್ರಗ್ಸ್, ಗಾಂಜಾ ವಿಚಾರದಲ್ಲಿ ಸ್ಯಾಂಡಲ್ ವುಡ್ ಈ ಮಟ್ಟಕ್ಕೆ ಬಂದಿರೋದು ದುರ್ದೈವ ಎಂದರು.

20 ವರ್ಷದಿಂದಲೂ ದಂಧೆ ನಡೆಯುತ್ತಿದೆ : ಡ್ರಗ್ಸ್ ದಂಧೆ ಮಟ್ಟ ಹಾಕಲು ಸರ್ಕಾರ ವಿಫಲವಾಗಿದೆ. ಯಡಿಯೂರಪ್ಪ ಸರ್ಕಾರ ಮಾತ್ರವಲ್ಲ, 20 ವರ್ಷದಿಂದ ಡ್ರಗ್ಸ್ ದಂಧೆ ನಡೆದುಕೊಂಡ ಬರ್ತಿದೆ. ಈಗ ದೊಡ್ಡ ಪ್ರಮಾಣಕ್ಕೆ ಹೋಗಿದೆ. ಜೆಡಿಎಸ್ ಸರ್ಕಾರವಿದ್ದಾಗಲೂ ಡ್ರಗ್ಸ್ ದಂಧೆ ನಡೆಯುತ್ತಿತ್ತು. ನಮ್ಮದೇ ಪಕ್ಷದ ಮುಖಂಡರು ಗಾಂಜಾ ಸೇರಿದಂತೆ ಬೇರೆ ಬೇರೆ ಚಟುವಟಿಕೆಯಿಂದ ಬಂದ ಹಣದಲ್ಲೇ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದರು. ಡ್ರಗ್ಸ್ ದಂಧೆ ಕೋರರಿಗೆ ರಾಜಕಾರಣಿಗಳ ಬೆಂಬಲವೂ ಇದೆ. ಈ ರೀತಿ ಬೆಂಬಲವಿಲ್ಲದೆ ಈ ಮಟ್ಟಕ್ಕೆ ವ್ಯಾಪಿಸಲು ಸಾಧ್ಯವೇ ಇಲ್ಲ ಅಂದ್ರು. ಗೋವಾ, ಶ್ರೀಲಂಕಾಕ್ಕೆ ಕರೆದೋಯ್ದು ಇಸ್ಪೀಟ್ ಆಡಿಸುವಂತ ದಂಧೆ. ತೋಟದ ಮನೆಗಳಲ್ಲಿ ರೇವ್ ಪಾರ್ಟಿ ಮಾಡುವಂತಹ ದಂಧೆ ನಡೆಯುತ್ತಿದೆ. ಇಂತಹ ಘಟನೆಗಳಿಂದ ದೂರವಾಗ ಬೇಕಾದ್ರೆ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತಾ ಆಗ್ರಹಿಸಿದ್ರು.

-ಡಿ.ಶಶಿಕುಮಾರ್

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments