Home ರಾಜ್ಯ ಶವಸಂಸ್ಕಾರ ಮಾಡಿದ ಎರಡೇ  ದಿನಕ್ಕೆ ಮನೆಗೆ ಬಂದ..!

ಶವಸಂಸ್ಕಾರ ಮಾಡಿದ ಎರಡೇ  ದಿನಕ್ಕೆ ಮನೆಗೆ ಬಂದ..!

ಹಾಸನ : ಸತ್ತಿದ್ದಾನೆ ಅಂದುಕೊಂಡು ಶವಸಂಸ್ಕಾರ ಮಾಡಿದ ಎರಡೇ ಎರಡು ದಿನಕ್ಕೆ ವ್ಯಕ್ತಿ ಮನೆಗೆ ಬಂದಿರುವ ಅಚ್ಚರಿಯ ಘಟನೆಯೊಂದು ಹಾಸನ ತಾಲ್ಲೂಕಿನ ಶಂಖ ಗ್ರಾಮದಲ್ಲಿ ನಡೆದಿದೆ.

ಶಿವಣ್ಣ ಎಂಬ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದ. ಮನೆಯವರು ಶಿವಣ್ಣ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್​ ಕೊಟ್ಟಿದ್ದರು. ಕಳೆದ ಜೂನ್ 18ರಂದು ಹಾಸನದ ಹೊಸ ಬಸ್​ ನಿಲ್ದಾನದ ಬಳಿ ಅಪರಿಚಿತ ವೃತದೇಹವೊಂದು ಪತ್ತೆಯಾದ ಹಿನ್ನಲೆ ಪೊಲೀಸರು ಶಿವಣ್ಣನ ಮನೆಯವರನ್ನು ಗುರುತಿಸಲು ಕರೆದಿದ್ದಾರೆ. ಮೃತ ದೇಹ ಶಿವಣ್ಣನದ್ದೇ ಹೋಲುತ್ತಿದ್ದರಿಂದ ಮನೆಯವರು ಶಿವಣ್ಣನ ಮೃತದೇಹವೆಂದು ಭಾವಿಸಿ ಅಂತ್ಯಕ್ರಿಯೆ ನೆರೆವೇರಿಸಿದ್ದರು..! ಶವ ಸಂಸ್ಕಾರ ಮಾಡಿ ಎರಡು ದಿನಗಳ ಬಳಿಕ ಶಿವಣ್ಣ ದಿಢೀರ್ ಪ್ರತ್ಯೆಕ್ಷನಾಗಿದ್ದಾನೆ. ಬಳಿಕ ಶವಸಂಸ್ಕಾರ ಮಾಡಿದ ದೇಹ ಬೇರೆ ಯಾರದ್ದೊ ಎಂದು ತಿಳಿದು ಬಂದಿದೆ. ಶಿವಣ್ಣನನ್ನು ಕಂಡು ಮನೆಯವರಲ್ಲಿ ಸಂಭ್ರಮ ಮನೆಮಾಡಿದೆ.  ಈ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಶವಸಂಸ್ಕಾರವಾದ ಮೃತ ದೇಹ ಯಾರದ್ದು ಎಂದು ಪೊಲೀಸರು ತಲೆ ಕೆಡೆಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments