Home ರಾಜ್ಯ ಇತರೆ ದೇಸೀ ಸೊಗಡನ್ನು ಬಿಂಬಿಸೋ ಮದುವೆಗೆ ಸಾಕ್ಷಿಯಾಯ್ತು ಕುಂದಾಪುರ..!

ದೇಸೀ ಸೊಗಡನ್ನು ಬಿಂಬಿಸೋ ಮದುವೆಗೆ ಸಾಕ್ಷಿಯಾಯ್ತು ಕುಂದಾಪುರ..!

ಉಡುಪಿ: ಮದುವೆ ಎಂದಾಕ್ಷಣ ನಮಗೆ ನೆನಪಾಗೋದು ಮಂಟಪ, ಪುರೋಹಿತರು, ಛತ್ರ, ಅದ್ಧೂರಿ ಆಡಂಬರದಲ್ಲಿ ಅತ್ತಿತ್ತಾ ತಿರುಗುವ ಗಂಡು ಮತ್ತು ಹೆಣ್ಣಿನ ಕಡೆಯವರ ಸಂಭ್ರಮ. ಆದ್ರೆ ಇಲ್ಲೊಂದು ಮದುವೆ ಸಮಾರಂಭ ಹಬ್ಬದಂತೆ ನೆರವೇರಿತು. ಅಲ್ಲದೆ ಬೇರೆ ಮದುವೆಗಳಿಗಿಂದ ವಿಭಿನ್ನವಾಗಿತ್ತು.

ಹೋಯ್​ ಇಲ್ ಕಾಣಿ ಮರ್ರೆ. ಎಂತ ಇದ್ ಹಬ್ಬುವಾ..? ಒಂದ್ ಬದಿಯಂಗ್ ವ್ಯಂಗ್ಯ ಚಿತ್ರಗಳ್, ಮತ್ತೊಂದ್ ಬದಿಯಂಗ್ ಬಾಣಲಿಯಂಗ್ ಬೆಯ್ತಿದ್ ಬಿಸಿ ಜಿಲೆಬಿ, ಈ ಹೆಣ್ಮಕ್ಕಳ್ ಕೂಕ್ಂಡ್ ಎಷ್ಟ್ ಚಂದ ಮಾಡಿ ರಂಗೋಲಿ ಹಾಕ್ತಿದ್ರ್ ಕಾಣಿ, ಯಬ್ಬಿಯಾ ಇದೆಂತ ಗೋಲಿ ಸ್ವಾಡ ಕುಡುಕೆ ಇಷ್ಟ್ ಜನ ಮತ್​ಹೈಕಂಡ್ದಾ. ಅಲ್ಲಾ ಈ ಸಾಲಂಗೆ ಈ ಹೆಣ್ ಯಾರಿಗೋ ಫೋನ್ ಮಾಡ್ತಪ್ಪಾ, ಯಾರೋ ಇಲ್ಲಿಗ್  ಬ್ಬಪ್ಪರ್ ಇದ್ರಾ ಕಾಂತ್? ಈ ಪರಿ ಅಡ್ಗಿ ರೆಡಿಯಾದ್​​ಕಂಡ್ರೆ ಒಂದ್ ಮುಷ್ಠಿ ಉಂಬ ಅಂಬಗಾತ್​​ ಅಲ್ದಾ..?  ಅದೆಲ್ಲ ಹೊಯ್ಲೀ  ಈ ಶಕಿಗಾಲ್ದಂಗೆ ಇದ್ಯಾವ್ ಹಬ್ಬಾ ಕೆಂತ್ರಿಯಾ..? ಇದ್ ಹಬ್ಬ ಅಲ್ದೆ ಕುಂದಾಪುರ ಕೆಂಚನೂರು ಗಣೇಶ್ ಮತ್ತು ಪೂರ್ಣಿಮಾನ್ ಮದಿ.

ಇದು ಕುಂದಾಪುರದ ಕೆಂಚನೂರು ಗಣೇಶ್​ ಹಾಗೂ ಪೂರ್ಣಿಮಾ ಅವರ ಮದುವೆ ಚಿತ್ರಣ. ಹೀಗೊಂದು ದೇಸಿ ಸೊಗಡನ್ನು ಬಿಂಬಿಸುವ ಮದುವೆಗೆ ಕುಂದಾಪುರ ಸಾಕ್ಷಿಯಾಯ್ತು. ಈ ಅದ್ಧೂರಿ ಮದುವೆಯಲ್ಲಿ ಗಣೇಶ್ ಮತ್ತು ಪೂರ್ಣಿಮಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ರು. ಅಲ್ಲದೆ ಹಬ್ಬದ ವಾತವರಣ ಸೃಷ್ಟಿಸಿದ್ದ ಈ ಮದುವೆಯಲ್ಲಿ ಸಾಕಷ್ಟು ವಿಶೇಷತೆಗಳಿದ್ವು. ಗ್ರಾಮೀಣ ಸೊಗಡನ್ನು ಸಾರುವ ಹಳೆ ಕಾಲದ ದೈನಂದಿನ ಬಳಕೆಯ ಪರಿಕರಗಳು ಮದುವೆಗೆ ಬಂದವರನ್ನು ಸೆಳೆದಿತ್ತು. ಶಿಕ್ಷಕ ಶ್ರೀನಿವಾಸ ಸೂರ್ಗೋಳಿ ಸಂಗ್ರಹಿಸಿದ್ದ ಅನ್ನದ ಚಟ್ಟಿ, ಅನ್ನದ ಸಿಬ್ಬಲು, ಚರಕ, ಕೈಮರ್ಗಿ, ಯಕ್ಷಗಾನ ಕಿರೀಟ, ಕಸೆ ಸೀರೆ ಮೊದಲಾದ 240ಕ್ಕೂ ಹೆಚ್ಚು ಪರಿಕರಗಳ ಪ್ರದರ್ಶನ ಇಡಲಾಗಿತ್ತು.

ಪಕ್ಕಾ ದೇಸಿ ಭೋಜನ: ಮದುವೆ ಕಾರ್ಯಕ್ರಮ ಇಷ್ಟಕ್ಕೆ ಸೀಮಿತವಾಗಿರದೆ, ಪಕ್ಕಾ ದೇಸಿ ಶೈಲಿಯ ಅದರಲ್ಲೂ ಕುಂದಾಪುರ ಗ್ರಾಮೀಣ ಭಾಗದ ಊಟ-ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವಾಗಿ ಮಹಿಳೆಯರಿಗೆ ಬಳೆ ತೊಡಲು ಉಚಿತ ಬಳೆ  ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಬಣ್ಣ ಬಣ್ಣದ ಬಳೆಗಳು ಮಹಿಳೆಯರ ಕೈಗಳನ್ನು ಶೃಂಗರಿಸಿದ್ವು. ಅಲ್ಲದೆ ಹೂವು ಮುಡಿಯುವವರಿಗೆ ನೀಡಲಾದ ಮಲ್ಲಿಗೆ ಸಂಭಾಗಣವನ್ನೆ ಘಮ್​​ ಎನ್ನಿಸಿತ್ತು.

ವೋಟ್​ ಮಾಡಿದವ್ರಿಗೆ ಪುಸ್ತಕ: ಮುಖ್ಯವಾಗಿ ಮದುವೆ ಮನೆಯಲ್ಲಿ ಪುಸ್ತಕದ ಅಂಗಡಿ ಇತ್ತು. ಅದರಲ್ಲೂ ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಮದುವೆಗೆ ಬಂದವರಿಗೆ ಮತದಾನದ ಶಾಯಿ ಗುರುತು ತೋರಿಸಿ 250 ರೂಪಾಯಿ ಮೌಲ್ಯದ ಪುಸ್ತಕವನ್ನು ತಮ್ಮದಾಗಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಒಟ್ಟಿನಲ್ಲಿ ವಿಭಿನ್ನವಾಗಿ ಆಯೋಜಿಸಲಾದ ಮದುವೆ ಕಾರ್ಯಕ್ರಮ ಆಮಂತ್ರಿತರಿಗೆ ಸಂತಸ ನೀಡ್ತು. ಎರಡು ಜೀವಗಳ ಬೆಸುಗೆ ಬೆಸೆಯಬೇಕಿದ್ದ ಮದುವೆ, ನೆಲದ ಸೊಗಡಿನ ಜೊತೆಗೆ, ಭಾಷಾಭಿಮಾನ, ಮರೆತು ಹೋದ ಸಂಸ್ಕೃತಿಯ ಮಹತ್ವ ಮೂಡಿಸುವಲ್ಲಿ ಯಶಸ್ವಿಯಾಯ್ತು.

– ಅಶ್ವಥ್ ಆಚಾರ್ಯ, ಉಡುಪಿ

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments