Saturday, May 28, 2022
Powertv Logo
Homeರಾಜ್ಯಮದುವೆಯಲ್ಲಿ ನವದಂಪತಿಯಿಂದ ಕೊರೋನ ಬಗ್ಗೆ ವಿಶೇಷ ಜಾಗೃತಿ

ಮದುವೆಯಲ್ಲಿ ನವದಂಪತಿಯಿಂದ ಕೊರೋನ ಬಗ್ಗೆ ವಿಶೇಷ ಜಾಗೃತಿ

ಬೆಂಗಳೂರು : ಸಿಲಿಕಾನ್​ ಸಿಟಿ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಸಮೀಪದ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್​ನಲ್ಲಿ ಕೊರೊನಾ ವಿಶೇಷ ಜಾಗೃತಿ ಮೂಡಿಸುವುದರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಮದುವೆಯ ನೆಪದಲ್ಲಿ ಕೊರೋನಾ ನಿರ್ಲಕ್ಷ್ಯದ ಬಗ್ಗೆ ಸಂಬಂಧಿಕರಿಗೆ ವಿಶೇಷವಾಗಿ ಜಾಗೃತಿ ಮೂಡಿಸಿ ಗಮನ ಸೆಳೆದರು. ಕೊರೋನಾ ಮೂರನೇ ಅಲೆ ಹೋಯ್ತು. ಮತ್ತೇ ನಾಲ್ಕನೇ ಅಲೆ ಶುರುವಾಗಲಿದೆ. ವಿದೇಶಗಳಲ್ಲಿ ಕೊರೋನಾ ಆರ್ಭಟಿಸುತ್ತಿದೆ. ನಮ್ಮ ಭಾರತಕ್ಕೂ ಕಾಲಿಡುವ ಸಾಧ್ಯತೆ ಇದ್ದು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ರು .

ಆಮಂತ್ರಣ ಪತ್ರದಲ್ಲಿ ಕೊವಿಡ್‌ ಜಾಗೃತಿ ಸಂದೇಶ ಮುದ್ರಿಸಲಾಗಿತ್ತು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಭಿತ್ತಿಪತ್ರಗಳನ್ನ ಹಿಡಿದು ಅತಿಥಿಗಳನ್ನ ಸ್ವಾಗತಿಸಿದ್ರು.
ಒಟ್ಟಾರೆ ಕೊವಿಡ್​​ ನಿಯಂತ್ರಿಸಲು ಸರ್ಕಾರ ಸಾಕಷ್ಟು ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ನಡುವೆ ಮದುವೆಯ ಸಮಾರಂಭದಲ್ಲೂ ಈ ರೀತಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

- Advertisment -

Most Popular

Recent Comments