ಸ್ಪೀಕರ್ ಸ್ಥಾನಕ್ಕೆ ರಮೇಶ್​ ಕುಮಾರ್ ರಾಜೀನಾಮೆ

0
647

ಬೆಂಗಳೂರು : ರಮೇಶ್ ಕುಮಾರ್​ರವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಕಳೆದ 14 ತಿಂಗಳುಗಳ ಕಾಲ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಇಂದು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಶುಕ್ರವಾರ ನೂತನ ಸಿಂಎ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್​ ಯಡಿಯೂರಪ್ಪ ಇಂದು ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿದರು. ವಿಶ್ವಾಸ ಮತದ ಬಳಿಕ ಹಣಕಾಸು ವಿದೇಯಕವನ್ನು ಅಂಗೀಕರಿಸಲಾಯಿತು. ನಂತರ ರಮೇಶ್ ಕುಮಾರ್​ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ತಮ್ಮ ವಿದಾಯದ ಭಾಷಣ ಮಾಡಿದ ಅವರು, ಈ ದೇಶದಲ್ಲಿ ಭ್ರಷ್ಟಾಚಾರದ ಮೂಲ ಚುನಾವಣೆಗಳು. ಚುನಾವಣಾ ವ್ಯವಸ್ಥೆ ಸುಧಾರಣೆ ಆಗದಿದ್ದಲ್ಲಿ ಭಷ್ಟಾಚಾರ ನಿರ್ಮೂಲನೆ ಆಗಲ್ಲ ಅಂದರು. ಜೊತೆಗೆ ಲೋಕಾಯುಕ್ತದಲ್ಲಿ ಸುಧಾರಣೆ ಆಗಲೇ ಬೇಕೆಂದರು. ತಮ್ಮ ರಾಜಿನಾಮೆ ಪತ್ರವನ್ನು ಡೆಬ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿಯವರಿಗೆ ನೀಡಿ ಸದನದಿಂದ ನಿರ್ಗಮಿಸಿದ್ರು.

LEAVE A REPLY

Please enter your comment!
Please enter your name here