ಟೈಮ್​ ಅಂದ್ರೆ ಇದೇ ನೋಡಿ : ಇವತ್ತು ಗಂಗೂಲಿ ಬಗ್ಗೆ ಶಾಸ್ತ್ರಿ ಹೀಗಂತಿದ್ದಾರೆ..!

0
891

ಎಲ್ರ ಕಾಲ್ ಎಳಿತದೆ ಕಾಲ.. ಇದು ರಿಯಲ್ ಸ್ಟಾರ್ ಉಪೇಂದ್ರ ಉಪ್ಪಿ-2 ಸಿನಿಮಾದ ಫೇಮಸ್ ಡೈಲಾಗು. ಅದು ಸತ್ಯ ಕೂಡ..! ಟೈಮು ಅಂದ್ರೆನೇ ಹಾಗೆ..ಯಾವಾಗ ಏನ್ ಆಗುತ್ತೆ? ಹೇಗಾಗುತ್ತೆ ಅಂತ ಯಾರೂ ಕೂಡ ಊಹಿಸಿಕೊಳ್ಳೋಕೆ ಆಗಲ್ಲ.
ಹೌದು ಸದ್ಯ ಭಾರತೀಯ ಕ್ರಿಕೆಟಿನಲ್ಲಿ ಇದೇ ಪರಿಸ್ಥಿತಿ! ಒಂದು ಟೈಮಲ್ಲಿ ಸೌರವ್ ಗಂಗೂಲಿಯನ್ನು ಟೀಕಿಸಿದ್ದ ಕೋಚ್ ರವಿಶಾಸ್ತ್ರಿ ಇಂದು ಅದೇ ಸೌರವ್ ಗಂಗೂಲಿಯ ಗುಣಗಾನ ಮಾಡ್ತಿದ್ದಾರೆ!
ರವಿಶಾಸ್ತ್ರಿ, ಗಂಗೂಲಿ ಹಾವು-ಮುಂಗುಸಿಯಂತೆ ಇದ್ದುದು ಎಲ್ರಿಗೂ ಗೊತ್ತೇ ಇದೆ. ತಂಡದ ಕೋಚ್ ಆಯ್ಕೆ ವೇಳೆ ತನ್ನನ್ನು ಕಡೆಗಣಿಸಿದ್ರು ಅಂತ ಗಂಗೂಲಿ ವಿರುದ್ಧ ಶಾಸ್ತ್ರಿ ಗರಂ ಆಗಿ ಟೀಕಾಪ್ರಹಾರ ಮಾಡಿದ್ರು. ಆಗ ಗಂಗೂಲಿ ಸಮ್ನಿರ್ತಾರಾ..? ಅವ್ರು ಕೂಡ ರವಿಶಾಸ್ತ್ರಿಗೆ ಖಡಕ್ ಆಗಿಯೇ ತಿರುಗೇಟು ನೀಡಿದ್ರು. ಆಮೇಲೆ ಶಾಸ್ತ್ರಿ ತೇಪ ಹಚ್ಚೋ ಪ್ರಯತ್ನಪಟ್ಟಿದ್ದು, ಗಂಗೂಲಿ ಕ್ಯಾರೇ ಮಾಡ್ದೆ ಸುಮ್ನಿದ್ದುದು ಎಲ್ಲ ಮುಗಿದ ಕಥೆ.
ಸದ್ಯ ಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಆಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸೌರವ್ ಗಂಗೂಲಿ ಬಿಸಿಸಿಐ ನೂತನ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಸೌರವ್ ಬಿಗ್ ಬಾಸ್ ಆಗುತ್ತಿದ್ದಂತೆ ಶಾಸ್ತ್ರಿ ಯೂಟರ್ನ್ ಹೊಡೆದಿದ್ದಾರೆ!
”ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿಗೆ ಮನಃಪೂರ್ವಕವಾಗಿ ಶುಭಕೋರುತ್ತೇನೆ. ಗಂಗೂಲಿ ನೇಮಕದಿಂದ, ಭಾರತೀಯ ಕ್ರಿಕೆಟ್ ಸರಿಯಾದ ದಾರಿಯಲ್ಲಿ ಸಾಗ್ತಿದೆ ಅನಿಸುತ್ತದೆ. ಗಂಗೂಲಿ ಒಬ್ಬ ನ್ಯಾಚ್ಯುರಲ್ ಲೀಡರ್. ಈಗಾಗಲೇ 4-5 ವರ್ಷಗಳ ಕಾಲ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಅವರಿಗಿದೆ. ಹೀಗಾಗಿ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರೋದು, ಭಾರತೀಯ ಕ್ರಿಕೆಟ್​ಗೆ ಸಿಕ್ಕ ಗೆಲುವು” ಅಂತ ಶಾಸ್ತ್ರಿ ಗಂಗೂಲಿಯನ್ನು ಹಾಡಿ ಹೊಗಳಿದ್ದಾರೆ.

LEAVE A REPLY

Please enter your comment!
Please enter your name here