ಡೇ -ನೈಟ್​​ ಟೆಸ್ಟ್​​ಗೆ ಗಂಗೂಲಿ ಗ್ರೀನ್ ಸಿಗ್ನಲ್ !

0
356

ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಡೇ – ನೈಟ್ ಟೆಸ್ಟ್ ಮ್ಯಾಚಿನತ್ತ ಚಿತ್ತ ಹರಿಸಿದ್ದಾರೆ. ಗಂಗೂಲಿ ಬಿಗ್​ಬಾಸ್​ ಆದ್ಮೇಲೆ ಡೇ-ನೈಟ್​ ಪಿಂಕ್ ಬಾಲ್ ಟೆಸ್ಟ್​ ಮ್ಯಾಚ್​ಗೆ ಜೀವಬಂದಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್​, ಸೌತ್ ಆಫ್ರಿಕಾದಲ್ಲಿ ಈಗಾಗಲೇ ಡೇ-ನೈಟ್ ಮ್ಯಾಚ್ ಯಶಸ್ವಿಯಾಗಿದೆ. ಐಸಿಸಿ ಟೆಸ್ಟ್​​ ಚಾಂಪಿಯನ್ಶಿಪ್ಪಿನಲ್ಲಿ ಡೇ-ನೈಟ್ ಟೆಸ್ಟ್​ ಮ್ಯಾಚ್ ಆಯೋಜಿಸುವ ಅವಕಾಶವಿದ್ದು, ಸದ್ಯದಲ್ಲೇ ಭಾರತದಲ್ಲಿ ಹಗಲು-ರಾತ್ರಿ ಟೆಸ್ಟ್ ಮ್ಯಾಚ್ ನಡೆಯಲಿದೆ. ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಪ್ಲಾನ್ ಮಾಡ್ತಿದ್ದಾರೆ. ಮುಂದಿನ ಬಿಸಿಸಿಐ ಸಭೆಗಳಲ್ಲಿ ಡೇ ನೈಟ್ ಟೆಸ್ಟ್ ಪಂದ್ಯಗಳ ಕುರಿತು ಚರ್ಚಿಸಿ, ತೀರ್ಮಾನಿಸಲಾಗುವುದು ಅಂತ ಗಂಗೂಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here