Tuesday, September 27, 2022
Powertv Logo
Homeವಿದೇಶರವೀಂದ್ರ ಜಡೇಜಾಗೆ ಅನುಮತಿ ನಿರಾಕರಿಸಿದ ಸೌರವ್ ಗಂಗೂಲಿ..!

ರವೀಂದ್ರ ಜಡೇಜಾಗೆ ಅನುಮತಿ ನಿರಾಕರಿಸಿದ ಸೌರವ್ ಗಂಗೂಲಿ..!

ಮಾರ್ಚ್​ 12ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಮೊದಲ ಮ್ಯಾಚ್ ಧರ್ಮಶಾಲಾದಲ್ಲಿ ನಡೆಯಲಿದೆ. ಅದೇ ಟೈಮಲ್ಲಿ ಮಾರ್ಚ್​ 9ರಿಂದ 13ರವರೆಗೆ ರಣಜಿ ಫೈನಲ್ ಜರುಗಲಿದೆ. ಸೌರಾಷ್ಟ್ರ ಮತ್ತು ಬಂಗಾಳ ಫೈನಲ್​​ನಲ್ಲಿ ಸೆಣೆಸಲಿವೆ. ಪ್ರಶಸ್ತಿಗೆ ಮುತ್ತಿಕ್ಕಲು ಅಭ್ಯಾಸ ನಿರತವಾಗಿರುವ ಸೌರಾಷ್ಟ್ರ ಟೀಮ್ ಇಂಡಿಯಾದ ಪ್ರಮುಖ ಆಲ್​ರೌಂಡರ್​ ರವೀಂದ್ರ ಜಡೇನಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್​ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಯದೇವ್​​ ಶಾ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ, ಮೊದಲ ಏಕದಿನ ಪಂದ್ಯದಿಂದ ಜಡೇಜಾ ಅವರನ್ನು ಬಿಟ್ಟು, ರಣಜಿ ಆಡಲು ಅವಕಾಶ ಕೊಡ್ಬೇಕು ಅಂತ ಮನವಿ ಮಾಡಿದ್ದರು. ಆ ಮನವಿಯನ್ನು ತಿರಸ್ಕರಿಸಿರುವ ಸೌರವ್ ಗಂಗೂಲಿ, ದೇಶ ಮೊದಲು, ದೇಸಿ ಟೂರ್ನಿಗಾಗಿ ರಾಷ್ಟ್ರೀಯ ತಂಡದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ , ಭಾರತ ಪ್ರತಿನಿಧಿಸುವ ತಂಡ ಬಲಾಡ್ಯವಾಗಿರಬೇಕು ಅಂತ ಹೇಳಿದ್ದಾರೆ.

13 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments