Home ಕ್ರೀಡೆ P.Cricket ಹ್ಯಾಪಿ ಬರ್ತ್​​ಡೇ ದಾದಾ : ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ಕೊಟ್ಟವರು ಕ್ಯಾಪ್ಟನ್ ಗಂಗೂಲಿ

ಹ್ಯಾಪಿ ಬರ್ತ್​​ಡೇ ದಾದಾ : ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ಕೊಟ್ಟವರು ಕ್ಯಾಪ್ಟನ್ ಗಂಗೂಲಿ

ಅಗ್ರೆಸ್ಸೀವ್‌ ಕ್ಯಾರೆಕ್ಟರ್‌, ಡಿಸ್ಟ್ರಕ್ಟೀವ್‌ ಬ್ಯಾಟ್ಸ್​ಮನ್, ಪವರ್‌ಫುಲ್‌ ಕಮಾಡಿಂಗ್.. ಯೆಸ್‌..ಇದು ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ ಸ್ಟೈಲ್‌….
ಎದುರಾಳಿಗಳ ಸ್ಲೆಡ್ಜಿಂಗ್‌, ಕಮೆಂಟ್‌ಗಳಿಗೆ ಅಲ್ಲೇ ತಿರುಗೇಟು ಕೊಡೋ ಛಲವಾದಿ..ಕಾರಣ ಏನೇ ಇರಬಹುದು, ತಪ್ಪು ಯಾರದ್ದೇ ಆಗಿರಬಹುದು, ಆದ್ರೆ ತಂಡದ ಸದಸ್ಯರನ್ನ ಯಾವತ್ತೂ ಬಿಟ್ಟುಕೊಡದ ಲೀಡರ್‌.. ಹೀಗೆ ಭಾರತೀಯ ಕ್ರಿಕೆಟ್‌ನಲ್ಲಿ ದಾದಾ ಅಂತಾನೇ ಕರೆಸಿಕೊಳ್ಳುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿಗಿಂದು ಹುಟ್ಟುಹಬ್ಬದ ಸಂಭ್ರಮ.
ಜುಲೈ 8, 1972ರಲ್ಲಿ ಹುಟ್ಟಿದ ಗಂಗೂಲಿ, ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಂಗಾಳದ ಪ್ರಿನ್ಸ್‌ ಎಂದೇ ಫೇಮಸ್ಸಾಗಿದ್ದ ದಾದಾ, ತಮ್ಮ ಕ್ರಿಕೆಟ್‌ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ.
ಫ್ರಂಟ್‌ ಫುಟ್ ಸಿಕ್ಸರ್‌, ಆಫ್‌ ಸೈಡ್‌ ವಂಡರ್ ಇದು ಗಂಗೂಲಿ ಬ್ಯಾಟಿಂಗ್‌ ಶೈಲಿ. ಎರಡು ಹೆಜ್ಜೆ ಮುಂದೆ ಬಂದ್ರೆ, ಸಿಕ್ಸ್‌, ಆಫ್‌ ಸೈಡ್‌ ಬಾಲ್‌ ಆದ್ರೆ ಬೌಂಡ್ರಿ ಶ್ಯೂರ್‌. ಇಂತ ಟ್ಯಾಲೆಂಟೆಡ್ ಕ್ರಿಕೆಟರ್‌ 1996ರಲ್ಲಿ ಲಾರ್ಡ್ಸ್‌ನಲ್ಲಿ ಟೆಸ್ಟ್‌ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ರು. ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲೇ ಗಂಗೂಲಿ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದೇ ಸೌರವ್‌ ಗಂಗೂಲಿ. ಮೂಲೆಗುಂಪಾಗಿದ್ದ ಟೀಮ್ ಇಂಡಿಯಾವನ್ನ ಆಕ್ರಮಣಕಾರಿ ವ್ಯಕ್ತಿತ್ವ ಹಾಗೂ ತನ್ನ ಛಲದಿಂದ ಕಟ್ಟಿ ಬೆಳೆಸಿದ್ರು. ರ್ಯಾಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿದ್ದ ಭಾರತ, 2ನೇ ಸ್ಥಾನಕ್ಕೇರಿದ್ದು, ಗಂಗೂಲಿ ಪರಿಶ್ರಮದ ಫಲ. 2003ರ ವಿಶ್ವಕಪ್​ನಲ್ಲಿ ಗಂಗೂಲಿ ತಂಡವನ್ನ ಮುನ್ನಡೆಸಿದ ರೀತಿಗೆ ವಿಶ್ವವೇ ಅಚ್ಚರಿಪಟ್ಟಿತ್ತು. ಘಟಾನುಘಟಿ ತಂಡಗಳನ್ನ ಮಣಿಸಿ ಟೀಮ್ ಇಂಡಿಯಾ ಫೈನಲ್‌ ತಲುಪಿತ್ತು..ಇದು ದಾದಾ ನಾಯಕತ್ವಕ್ಕೆ ಹಿಡಿದ ಕನ್ನಡಿ..
ಮೈದಾನದಲ್ಲಿ ಗಂಗೂಲಿ ಯಾವತ್ತೂ ಅಗ್ರೆಸ್ಸೀವ್‌. ಎದುರಾಳಿ ತಂಡ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ..ಕೆಣಕಿದ್ರೆ, ರಿಬಾಂಡ್‌ ಖಚಿತ.. 2002ರ ನಾಟ್‌ವೆಸ್ಟ್‌ ಸರಣಿ ಗೆದ್ದಾಗ ಗ್ಯಾಲರಿಯಲ್ಲಿದ್ದ ಗಂಗೂಲಿ ಶರ್ಟ್‌ ಬಿಚ್ಚಿ ಗಾಳಿಯಲ್ಲಿ ತೇಲಾಡಿಸಿ, ಆಂಡ್ರ್ಯೂ ಫ್ಲಿಂಟಾಫ್‌ಗೆ ತಿರುಗೇಟು ನೀಡಿದ್ದನ್ನ ಯಾರು ಮರೆಯೋಕೆ ಸಾಧ್ಯವಿಲ್ಲ…
113 ಟೆಸ್ಟ್‌ ಪಂದ್ಯಗಳನ್ನಾಡಿರೋ ದಾದಾ, 42.17ರ ಸರಾಸರಿಯಲ್ಲಿ 7212ರನ್ ಕಲೆ ಹಾಕಿದ್ದಾರೆ. 16 ಶತಕ ಹಾಗು 35 ಅರ್ಧಶತಕ ಸಿಡಿಸಿದ್ದಾರೆ..239 ರನ್‌ ಗಂಗೂಲಿ ಬೆಸ್ಟ್‌ ಸ್ಕೋರ್‌.. ಏಕದಿನ ಕ್ರಿಕೆಟ್‌ನಲ್ಲಿ ಆಡಿರುವ 311 ಪಂದ್ಯಗಳಲ್ಲಿ 41.02ರ ಸರಾಸರಿಯಲ್ಲಿ 11,363ರನ್‌ ಪೇರಿಸಿದ್ದಾರೆ. ಅದರಲ್ಲಿ 22 ಶತಕ ಹಾಗು 72 ಹಾಫ್‌ ಸೆಂಚುರಿ ಸೇರಿವೆ. ನ್ಯೂಜಿಲೆಂಡ್ ವಿರುದ್ಧ ಬಾರಿಸಿದ್ದ 183 ರನ್​ಗಳು ದಾದಾ ಬೆಸ್ಟ್ ಸ್ಕೋರ್‌.
ಸುಮಾರು 5 ವರ್ಷಗಳ ಕಾಲ ಟೀಮ್ ಇಂಡಿಯಾವನ್ನ ಮುನ್ನಡೆಸಿದ ಗಂಗೂಲಿ, ತಮ್ಮ ನಿಷ್ಟುರ ವ್ಯಕ್ತಿತ್ವದಿಂದಾಗಿ ಹಲವರ ಟೀಕೆಗೆ ಗುರಿಯಾದ್ರು. ಕೋಚ್ ಗ್ರೆಗ್‌ ಚಾಪೆಲ್‌ ಜೊತೆಗಿನ ಭಿನ್ನಾಬಿಪ್ರಾಯದಿಂದಾಗಿ ತಂಡದಲ್ಲಿ ಸ್ಥಾನವನ್ನೇ ಕಳೆದುಕೊಂಡ ದಾದಾ ಮತ್ತೆ ತನ್ನ ಸಾಮರ್ಥ್ಯ ಸಾಬೀತುಪಡಿಸಿ ಕಮ್​ಬ್ಯಾಕ್​ ಮಾಡಿದ್ದು ಭಾರತೀಯ ಕ್ರಿಕೆಟ್​ನಲ್ಲಿ ಎಂದಿಗೂ ಮರೆಯಲಾಗದ ಘಟನೆ.
ಟೀಮ್ಇಂಡಿಯಾಗೆ ವಿದಾಯ ಹೇಳಿರುವ ಗಂಗೂಲಿ, ಪ್ರಸಕ್ತ ವಿಶ್ವಕಪ್​​ನಲ್ಲಿ ವಿವರಣೆಗಾರನಾಗಿ ಕಾಣಿಸಿಕೊಳ್ತಾ ಇದ್ದಾರೆ. ಜೊತೆಗೆ ಬಂಗಾಳ ಕ್ರಿಕೆಟ್​​ ಅಸೋಸಿಯೆಶನ್​ ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸ್ತಾ ಇದ್ದಾರೆ.
ಭಾರತದ ಯಶಸ್ವಿ ನಾಯಕರಲ್ಲಿ ದಾದಾಗೆ ಅಗ್ರಸ್ಥಾನವಿದೆ..ಕ್ರಿಕೆಟಿಗನಾಗಿ, ನಾಯಕನಾಗಿ, ಸದ್ಯ ಆಡಳಿತಗಾರನಾಗಿ ಸೈಎನಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಬಂಗಾಳದ ಹುಲಿ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ..ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಗಂಗೂಲಿಗೆ ಶುಭಾಶಯಗಳು.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments