Thursday, October 6, 2022
Powertv Logo
Homeದೇಶತೇಜಸ್ವಿ ಸೂರ್ಯ, ಚಕ್ರರ್ತಿ ಸೂಲಿಬೆಲೆ ಕೊಲೆಗೆ ಸ್ಕೆಚ್​!

ತೇಜಸ್ವಿ ಸೂರ್ಯ, ಚಕ್ರರ್ತಿ ಸೂಲಿಬೆಲೆ ಕೊಲೆಗೆ ಸ್ಕೆಚ್​!

ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಡಿಸೆಂಬರ್ 22ರಂದು ನಗರದ ಟೌನ್​ ಹಾಲ್​ ಬಳಿ ನಡೆದ ಸಿಎಎ ಜಾಗೃತಿ ಜಾಥಾದ ಸಂದರ್ಭದಲ್ಲಿ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ರು. ಜಾಥಾ ಮುಗಿಸಿ ವಾಪಸ್ಸಾಗುವಾಗ ಜೆ.ಸಿ ನಗರದಲ್ಲಿ 6 ಮಂದಿ ಎಸ್​ಡಿಪಿಐ ಕಾರ್ಯಕರ್ತರು ಆರ್ ಎಸ್​ ಎಸ್​ ಕಾರ್ಯಕರ್ತ ವರುಣ್​​ ಮೇಲೆ ಹಲ್ಲೆ ನಡೆಸಿದ್ರು. 2 ಬೈಕ್​ಗಳಲ್ಲಿ ತೆರಳಿದ್ದ ಆರೋಪಿಗಳು ರಾಡ್​ ಮತ್ತು ಲಾಂಗ್​ಗಳಿಂದ ವರುಣ್ ಮೇಲೆ ಹಲ್ಲೆ ನಡೆಸಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್​ ಸಿದ್ದಿಕ್,​ ಅಕ್ಬರ್​ ಬಾಷಾ, ಸಾದಿಕ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರ ವಿಚಾರಣೆ ವೇಳೆ ವರುಣ್​ ಟಾರ್ಗೆಟ್ ಆಗಿರ್ಲಿಲ್ಲ. ಬದಲಾಗಿ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆ ಮಾಡೋದು ಉದ್ದೇಶವಾಗಿತ್ತು ಎಂಬ ಆಘಾತಕಾರಿ ವಿಚಾರ ಬಾಯ್ಬಿಟ್ಟಿದ್ದಾರೆ.tejasvi surya

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments