Monday, August 15, 2022
Powertv Logo
Homeರಾಜ್ಯಬೆಳಗಾವಿ ಯೋಧಗೆ ಭಾವಪೂರ್ಣ ವಿದಾಯ

ಬೆಳಗಾವಿ ಯೋಧಗೆ ಭಾವಪೂರ್ಣ ವಿದಾಯ

ಚಿಕ್ಕೋಡಿ: ಬೆಳಗಾವಿಯ ಜನ ತಮ್ಮೂರಿನ ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಭಾವಪೂರ್ಣ ವಿದಾಯ ಹೇಳಿದರು. ಕಾಶ್ಮೀರದ ಕುಲಗಾಂನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮನಾದ ಬೆಳಗಾವಿಯ ಯೋಧ ಪ್ರಕಾಶ ಜಾಧವ (೨೯) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರಗಳೊಂದಿಗೆ ಸ್ವಗ್ರಾಮ ಬೂದಿಹಾಳದಲ್ಲಿ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ, ಎಸ್ಪಿ ಸುಧೀರ ಕುಮಾರ ರೆಡ್ಡಿ ಭಾಗಿಯಾಗಿದ್ದರು. ಪ್ರಕಾಶ ಅಂತ್ಯಕ್ರಿಯೆ ಅವರ ಜಮೀನಿನಲ್ಲೇ ನೆರವೇರಿತು. ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಬಲಿಯಾಗಿದ್ದ ಯೋಧನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿಯಾದರು. ಪ್ರಕಾಶ್​ ಅವರು ಪತ್ನಿ, ಮೂರು ತಿಂಗಳ ಮಗಳು ಶ್ರಾವಣಿ, ತಂದೆ ತಾಯಿ, ಸಹೋದರನನ್ನು ಅಗಲಿದ್ದಾರೆ. ಇವರು 2007ರಲ್ಲಿ ಸೇನೆಗೆ ಸೇರಿದ್ದರು.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments