ಉಗ್ರರ ದಾಳಿಯಲ್ಲಿ ಮಂಡ್ಯದ ಯೋಧ ಹುತಾತ್ಮ

0
413

ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಹೊನ್ನಯ್ಯ ಎಂಬವವರ ಪುತ್ರ ಎಚ್.ಗುರು ಹುತಾತ್ಮರು.

ಗುರು ಅವರು 82ನೇ ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 6 ತಿಂಗಳ ಹಿಂದೆ ಗುರು ಅವರ ವಿವಾಹ ನಡೆದಿತ್ತು. ಗುರು ಹುತಾತ್ಮರಾದ ಸುದ್ದಿ ತಿಳಿದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. 5 ವರ್ಷಗಳಿಂದ ಎಚ್.ಗುರು ಅವರು ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರು ಮೊದಲು  ಜಾರ್ಖಂಡ್‌ನಲ್ಲಿ 94 ನೇ ಬೆಟಾಲಿಯನ್‌ನಲ್ಲಿದ್ದರು. ಬಳಿಕ 82ನೇ ಬೆಟಾಲಿಯನ್‌ ಸೇರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು.

ಉಗ್ರರ ದಾಳಿಗೆ ಯೋಧ ಗುರು ಹುತಾತ್ಮರಾದ ಸುದ್ದಿ ತಿಳಿದು ಸಹೋದರ ಅಸ್ವಸ್ಥರಾಗಿದ್ದಾರೆ. ಮೃತ ಯೋಧ ಗುರು ಸಹೋದರ ಆನಂದ್ ಅವರು ರಾತ್ರಿಯಿಂದಲೂ ಅತ್ತು ಸುಸ್ತಾಗಿದ್ದರಿಂದ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಆನಂದ್​ನನ್ನು ಸ್ಥಳೀಯರು ಕೆ.ಎಂ.ದೊಡ್ಡಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

LEAVE A REPLY

Please enter your comment!
Please enter your name here