HomeP.Cricketಇಂಟರ್ ನ್ಯಾಷನಲ್ಕೇರಳ ಲಾಟರಿಯಲ್ಲಿ "ಕೋಟಿ ಗೆದ್ದ" ಮಂಡ್ಯದ ಸೋಹನ್!

ಕೇರಳ ಲಾಟರಿಯಲ್ಲಿ “ಕೋಟಿ ಗೆದ್ದ” ಮಂಡ್ಯದ ಸೋಹನ್!

ಮಂಡ್ಯ: ಅದೃಷ್ಟ ಅನ್ನೋದು ಯಾರಿಗೆ, ಯಾವಾಗ, ಒಲಿಯುತ್ತೆ ಅನ್ನೋದನ್ನ ಗೆಸ್ ಮಾಡೋಕೆ ಆಗೋಲ್ಲ. ಕೇರಳದಿಂದ ಅದೃಷ್ಟ ಲಕ್ಷ್ಮೀ ಹುಡ್ಕೊಂಡು ಬಂದಿದ್ದಾಳೆ. ಟೂರಿಗೆ ಹೋಗಿ ಇನ್ವೆಸ್ಟ್ ಮಾಡಿದ್ದು ಕೇವಲ 100 ರೂ. ಮಾತ್ರ, ಅದಕ್ಕೆ ಪ್ರತಿಯಾಗಿ ಲಾಟರಿ ಮೂಲಕ ಆತ ಗೆದ್ದಿದ್ದು ಒಂದು ಕೋಟಿ ರೂಪಾಯಿ.

ಅಚ್ಚರಿಯಾದರೂ ಸತ್ಯ. ಕುಟುಂಬದವರ ಜೊತೆ ಸಂಭ್ರಮಾಚರಣೆ ಮಾಡ್ತಿರೋ ಈ ಯುವಕನ 20ರ ಪ್ರಾಯದ ಸೋಹನ್ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿ ನಿವಾಸಿ. ಗ್ರಾಮದ ಗಂಗಾ-ಬಲರಾಂ ದಂಪತಿಯ ಪುತ್ರ. ಕಳೆದ ವಾರ ಪ್ರವಾಸಕ್ಕೆಂದು ಕುಟುಂಬ ಸದಸ್ಯರ ಜೊತೆ ಕೇರಳ ರಾಜ್ಯಕ್ಕೆ ತೆರಳಿದ್ರು. ಶುಕ್ರವಾರ ಸೋಹನ್ ತನ್ನ ಸಹೋದರನ ಸ್ನೇಹಿತರ ಲಾಟರಿ ಅಂಗಡಿಯಲ್ಲಿ 100ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಒಂದನ್ನ ಖರೀದಿ ಮಾಡಿದ್ರು. ಭಾನುವಾರ ಕರ್ನಾಟಕಕ್ಕೆ ವಾಪಸ್ ಆಗುವ ವೇಳೆ ಲಾಟರಿ ಅಂಗಡಿಯವರು ಸೋಹನ್ ಸಹೋದರನಿಗೆ ದೂರವಾಣಿ ಕರೆ ಮಾಡಿದ್ದಾರೆ. ನಮ್ಮ ಅಂಗಡಿಗೆ ಒಂದು ಕೋಟಿ ಲಾಟರಿ ಹೊಡೆದಿದೆ. ನೀವು ಖರೀದಿ ಮಾಡಿದ ಲಾಟರಿ ಟಿಕೆಟ್ ನಂಬರ್ ಹೇಳುವಂತೆ ಕೇಳಿದ್ದಾರೆ. ಸೋಹನ್ ಖರೀದಿ ಮಾಡಿದ ಲಾಟರಿ ನಂಬರ್ ಗೆ ಒಂದು ಕೋಟಿ ರೂಪಾಯಿ ಬಂದಿರೋ ವಿಷಯ ತಿಳಿಯುತ್ತಿದ್ದಂತೆ ಸೋಹನ್ ಮತ್ತು ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ವಾಪಸ್ ಲಾಟರಿ ಅಂಗಡಿಗೆ ತೆರಳಿ ಹಣ ಪಡೆಯಲು ಅಗತ್ಯ ದಾಖಲಾತಿ ಒದಗಿಸುತ್ತಿದ್ದಾರೆ.

ಡಿ.ಶಶಿಕುಮಾರ್

LEAVE A REPLY

Please enter your comment!
Please enter your name here

- Advertisment -

Most Popular

Recent Comments