Home uncategorized ಸಾಮಾಜಿಕ ಜಾಲಾತಾಣಗಳು ಅಪಾಯಕಾರಿ ಬೆಳವಣಿಗೆ ಕಾಣುತ್ತಿವೆ - ವೈ.ಎಸ್.ವಿ. ದತ್ತಾ

ಸಾಮಾಜಿಕ ಜಾಲಾತಾಣಗಳು ಅಪಾಯಕಾರಿ ಬೆಳವಣಿಗೆ ಕಾಣುತ್ತಿವೆ – ವೈ.ಎಸ್.ವಿ. ದತ್ತಾ

ಶಿವಮೊಗ್ಗ: ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆಗಳನ್ನು ವಿರೋಧಿಸಿ ಮತ್ತು ಆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ಧೇಶದಿಂದ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ಹೇಳಿದ್ದಾರೆ. ಆ. 25 ರ ಬೆಳಿಗ್ಗೆ 11 ಗಂಟೆಗೆ ದೈವಜ್ಞ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಈ ವಿಚಾರ ಸಂಕಿರಣವನ್ನು ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಉದ್ಗಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇವಲ ಜೆಡಿಎಸ್ ಪಕ್ಷವಲ್ಲದೇ ಪ್ರಗತಿಪರರು, ರೈತರು, ಚಿಂತಕರು, ಹೋರಾಟಗಾರರು ಕೂಡ ಭಾಗವಹಿಸಲಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಕೇವಲ 200 ಜನರಿಗೆ ಸೀಮಿತವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಸ್ಕ್ , ಸಾಮಾಜಿಕ ಅಂತರ ಇವುಗಳನ್ನು ಪಾಲಿಸಲಾಗುವುದು ಎಂದಿದ್ದಾರೆ.

ಹಾಗೆಯೇ ರಾಜ್ಯ ಸರ್ಕಾರ ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಕೂಡ ವಿಕೃತ ರೂಪ ತಾಳುತ್ತಿದೆ. ಇಲ್ಲಿ ರೈತರಿಗೆ ಬಹಳ ಅನ್ಯಾಯವಾಗುತ್ತಿದ್ದು, ಬಂಡವಾಳದಾರರು ಭೂಮಿಯ ಒಡೆಯರಾಗುತ್ತಾ ಇಡೀ ಕೃಷಿಯನ್ನೇ ಧ್ವಂಸ ಮಾಡುತ್ತಾರೆ. ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳನ್ನು ಮುಚ್ಚುವ ಹುನ್ನಾರವಿದು. ಇಡೀ ದೇಶದ ಅರ್ಥವ್ಯವಸ್ಥೆಯನ್ನೇ ಖಾಸಗಿಗಳ ಕೈಯಲ್ಲಿ ಕೊಡುವ ಹುನ್ನಾರ ಸ್ಪಷ್ಟವಾಗಿದೆ. ಜೊತೆಗೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಮತ್ತು ರಾಜ್ಯ ಸರ್ಕಾರದ ಆನ್‍ಲೈನ್ ಶಿಕ್ಷಣ ಇವುಗಳು ಕೂಡ ಭಯ ಹುಟ್ಟಿಸುತ್ತಿವೆ. ಶೇ.35 ರಷ್ಟು ಪಠ್ಯಗಳನ್ನು ಕಡಿತ ಮಾಡುವ ನೆಪವನ್ನಿಟ್ಟುಕೊಂಡು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಭಾವನೆಗಳನ್ನು ಕೆರಳಿಸುವ ಪಠ್ಯಗಳನ್ನು ಕಡಿಮೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಹೀಗಾಗಿ ಈ ಎಲ್ಲಾ ಕಾಯ್ದೆಗಳನ್ನು ವಿರೋಧಿಸುತ್ತಾ ಮತ್ತು ಜನಜಾಗೃತಿ ಮೂಡಿಸುವ ಜನಾಭಿಪ್ರಾಯ ಹರಡುವ, ತಾತ್ವಿಕ ವಿಚಾರಗಳನ್ನು ತಿಳಿಸುವ, ಅರಿವನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳನ್ನು ಜೊತೆಗೆ ಸೇರಿಸಿಕೊಂಡು ಒಂದು ಜನಧ್ವನಿಯನ್ನು ಮೂಡಿಸುವ ಉದ್ಧೇಶವೇ ಇದಾಗಿದೆ ಎಂದರು.

 ಬೆಳೆಯುತ್ತಿರುವ ಸಾಮಾಜಿಕ ಜಾಲತಾಣಗಳು 

ಮನುಷ್ಯನ ಎಲ್ಲ ರೀತಿಯ ಭಾವನೆಗಳನ್ನು ಸಾಮಾಜಿಕ ಜಾಲತಾಣಗಳು ಅಪಾಯಕಾರಿಯಾಗಿ ನೂಕುತ್ತಿವೆ. ಇವು ಕೇವಲ ರಾಜಕಾರಣಕ್ಕೆ ಮಾತ್ರ ಅಪಾಯಕಾರಿಯಾಗಿಲ್ಲ. ಮುಂದೊಂದು ದಿನ ಪತ್ರಿಕೆಗಳಿಗೂ ಕೂಡ ಅಪಾಯಕಾರಿಯಾಗುತ್ತವೆ. ಮೂಲಭೂತವಾದಿಗಳು ಈ ಸಾಮಾಜಿಕ ಜಾಲತಾಣದ ಜುಟ್ಟು ಹಿಡಿದುಕೊಂಡಿರುತ್ತವೆ. ಪಕ್ಷಗಳು, ಸಂಘಟನೆಗಳು ಎಷ್ಟೇ ಒಳ್ಳೆಯ ಕೆಲಸಗಳನ್ನು ಭೌತಿಕವಾಗಿ ಮಾಡುತ್ತಿದ್ದರೆ ಈ ಸಾಮಾಜಿಕ ಜಾಲತಾಣಗಳು ಮಾತ್ರ ಇವೆಲ್ಲವನ್ನು ನುಂಗಿಹಾಕಿಬಿಡುತ್ತವೆ. ಇದರ ಕಪಿಮುಷ್ಟಿಗೆ ಸಿಲುಕಿದ ನಮ್ಮ ಯುವ ಜನಾಂಗ ಮತ್ತು ಸಮಾಜ ಅದರಿಂದ ಹೊರಬರಲು ತುಂಬಾ ಕಷ್ಟವಾಗುತ್ತದೆ ಎಂದು ದತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧ್ವನಿ ಕಳೆದುಕೊಂಡವರು 

ನಮ್ಮ ಪಕ್ಷವನ್ನು ಸೇರಿಕೊಂಡಂತೆ ರಾಜಕೀಯ ಪಕ್ಷಗಳು ಧ್ವನಿಯನ್ನೇ ಕಳೆದುಕೊಳ್ಳುತ್ತಿವೆ. ಜೆಡಿಎಸ್‍ನಲ್ಲಿ ಇದು ಹೆಚ್ಚು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇದು ಸತ್ಯದ ವಿಷಯ. ಎಲ್ಲರಿಗೂ ಬೇಕಾಗಿರುವುದು ರಾಜಕಾರಣ. ಮತ ಬ್ಯಾಂಕ್, ಅಧಿಕಾರ ಹಿಡಿಯುವುದೇ ಆಗಿದೆ. ಆದರ್ಶಗಳು, ವಿವೇಕಗಳು ರಾಜಕೀಯ ಪಕ್ಷಗಳಲ್ಲಿ ಸತ್ತು ಹೋಗಿವೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಇದು ಎಲ್ಲ ಪಕ್ಷಗಳಲ್ಲಿಯೂ ಕಂಡುಬರುತ್ತದೆ ಎಂದರು. ಕೇವಲ ರಾಜಕೀಯ ಪಕ್ಷಗಳು ಮಾತ್ರ ಧ್ವನಿ ಕಳೆದುಕೊಂಡಿಲ್ಲ. ಸಂಘಟನೆಗಳು, ಹೋರಾಟಗಾರರು ಬಹಳ ಮುಖ್ಯವಾಗಿ ಸಾಹಿತಿಗಳು, ಪ್ರಗತಿಪರರು ಎನಿಸಿಕೊಂಡಿರುವವರು ಕೂಡ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಹೋರಾಟಗಳು ದಿಕ್ಕುತಪ್ಪುತ್ತಿವೆ. ಸಾಹಿತಿಗಳ ವಿಷಯಗಳು ಕಳಚಿ ಬೀಳತೊಡಗಿವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ಇದ್ದೇವೆ ಎನ್ನುವುದೇ ತುಂಬಾ ವಿಷಾಧವಾಗಿದೆ ಎಂದರು.

ನ್ಯಾಯಾಂಗ ತನಿಖೆಗೆ ಆಗ್ರಹ 

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಬೇಕು ಎಂದು ವೈ.ಎಸ್.ವಿ. ದತ್ತಾ ಆಗ್ರಹಿಸಿದ್ದಾರೆ. ಘಟನೆಗೆ ಕಾರಣ ರಾಜಕಾರಣ, ಮತಬ್ಯಾಂಕ್, ಮೂಲಭೂತವಾದಗಳು ಯಾವುದೇ ಇರಲಿ, ಯಾರೇ ಗಲಾಟೆ ಮಾಡಿರಲಿ ಅಥವಾ ಜೆಡಿಎಸ್ ನವರೇ ಮಾಡಿರಲಿ ದಾಕ್ಷಿಣ್ಯವೇ ಬೇಡ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಮತ್ತು ಈ ತನಿಖೆ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಮೂಲಕ ಆಗಬೇಕು. ಒಟ್ಟಿನಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ದತ್ತಾ ಒತ್ತಾಯಿಸಿದ್ರು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments