ಆನ್​ಲೈನ್​ನಲ್ಲಿ ಶಾಪಿಂಗ್ ಮಾಡಿದ ಕೋತಿ!

0
296

ಈಗೀಗ ಮಾರುಕಟ್ಟೆ, ಮಾಲ್​ಗಳಿಗೆ ಹೋಗಿ ಶಾಪಿಂಗ್ ಮಾಡೋದಕ್ಕಿಂತ ಹೆಚ್ಚಾಗಿ ಆನ್​ಲೈನ್​ನಲ್ಲಿ ಶಾಪಿಂಗ್ ಮಾಡೋರೆ ಹೆಚ್ಚು. ಆನ್​ಲೈನ್ ಶಾಪಿಂಗ್ ಹವಾ ಹೇಗಿದೆ ಅಂದ್ರೆ, ಕೋತಿ ಕೂಡ ಆನ್​ಲೈನ್​​ನಲ್ಲಿ ಶಾಪಿಂಗ್​​ ಮಾಡಿ ಗಮನಸೆಳೆದಿದೆ!

ಅರೆ, ಕೋತಿ ಆನ್​ಲೈನ್ ಶಾಪಿಂಗ್ ಮಾಡ್ತಾ ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ? ಅಚ್ಚರಿಯಾದ್ರು ಇದು ಸತ್ಯ. ಕೋತಿ ಆನ್​ಲೈನ್​ನಲ್ಲಿ ಶಾಂಪಿಂಗ್ ಮಾಡಿದೆ!

ಈ ಕೋತಿ ಚೀನಾದ್ದು! ಚೀನಾದ ಜಿಯಾಂಗ್ಸು  ಪ್ರಾಂತ್ಯದ ಚಾಂಗ್ಝೂ ಪ್ರದೇಶದ ಯಾಚೆಂಗ್​ ವೈಲ್ಡ್​​ ಆನಿಮಲ್​​ ವಲ್ಡ್​​​​ನಲ್ಲಿನ ಚಾಲಾಕಿ ಕೋತಿ ಇದು.

ಅಲ್ಲಿನ ಝೂ ಕೀಪರ್ ಎಲ್ವಿ ಮೆಂಗ್​ ಎಂಬುವರು ಆನ್​​ಲೈನ್ ಮೂಲಕ  ಆಗಾಗ ವಸ್ತುಗಳನ್ನು ಖರೀದಿಸ್ತಿದ್ದರು. ಇದನ್ನು ಕೋತಿ ಗಮನಿಸುತ್ತಿತ್ತು.  ಎಲ್ವಿ ಮೆಂಗ್ ಮೊಬೈಲ್ ಬಿಟ್ಟು ಆಚೆ ಹೋದಾಗ, ಈ ಕೋತಿ ತನ್ನ ಕೈಚಳಕ ತೋರಿಸಿದೆ.

ಎಲ್ವಿ ಮನೆಗೆ ಬಂದು ನೋಡಿದಾಗ, ಕೆಲವೊಂದು ವಸ್ತುಗಳನ್ನು ಖರೀದಿಸಿರುವ ಬಗ್ಗೆ ಮೆಸೇಜ್ ಬಂದಿತ್ತು. ಅರೆ, ನಾನೇನು ಖರೀದಿಸಿಲ್ವಲ್ಲಾ ಅಂತ ಎಲ್ವಿಗೆ ಆಶ್ಚರ್ಯವಾಗಿದೆ. ಬಳಿಕ ಸಿಸಿಟಿವಿ ಫೂಟೇಜ್ ನೋಡಿದಾಗ ಕೋತಿ ಕೈಚಳಕ ಗೊತ್ತಾಗಿದೆ.

LEAVE A REPLY

Please enter your comment!
Please enter your name here